Monday, June 15, 2026
Homeಕರಾವಳಿಉಪ್ಪಿನಂಗಡಿ; ಕಳ್ಳನೊಬ್ಬ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉಪ್ಪಿನಂಗಡಿ; ಕಳ್ಳನೊಬ್ಬ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

- Advertisement -
- Advertisement -

ಉಪ್ಪಿನಂಗಡಿ; ಕಳ್ಳನೊಬ್ಬ ಕಳ್ಳತನಕ್ಕೆ ಹೊಂಚು ಹಾಕುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ಎಂಬಲ್ಲಿ ನಡೆದಿದೆ.

ಪೆರಿಯಡ್ಕ ಸಹಕಾರಿ ಸಂಘದ ಶಾಖಾ ಕಟ್ಟಡದ ಮುಂಭಾಗದಲ್ಲಿ ಕಳ್ಳನೊಬ್ಬ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ದೃಶ್ಯ . ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೂಡಲೇ ಸ್ಥಳೀಯ ಕೆಲ ಯುವಕರು ಈತನ ಚಲನವಲನವನ್ನು ದೂರದಿಂದ ನೋಡಿದ್ದಾರೆ. ಬಳಿಕ ಅವರು ಹತ್ತಿರ ಬರುತ್ತಿದ್ದಂತೆ ಈತ ಪರಾರಿಯಾಗಿದ್ದಾನೆ. ಘಟನೆ ಕುರಿತು ಉಪ್ಪಿನಂಗಡಿ ಪೊಲೀಸರಿಗೂ ದೂರು ನೀಡಲಾಗಿದೆ. ಆದರೆ ಸಿಸಿ ಕ್ಯಾಮರಾದಲ್ಲಿ ಈತನ ಮುಖದ ಚಿತ್ರಣ ಸ್ಪಷ್ಟವಾಗಿ ಕಂಡುಬರದ ಹಿನ್ನಲೆಯಲ್ಲಿ ಕಳ್ಳನ ಪತ್ತೆಯ ಕಾರ್ಯಕ್ಕೆ ತಡೆಯಾಗಿದೆ ಎಂದು ತಿಳಿದುಬಂದಿದೆ.

ಸ್ಥಳೀಯರ ಪ್ರಕಾರ ಈತ ಬೇರೆ ಊರಿನ ವ್ಯಕ್ತಿ. ಪೂರ್ತಿಯಾಗಿ ರೈನ್ ಕೋಟ್ ಹಾಕಿರುವ ಕಾರಣ ಈತನ ಮುಖ ಸ್ಪಷ್ಟವಾಗಿ ಕಂಡುಬರಲಿಲ್ಲ. ಈತನನ್ನು ಪೆರಿಯಡ್ಕದ ಸಮೀಪದ ಓಡ್ಲ ತನಕ ಯುವಕರು ಬೆನ್ನಟ್ಟಿದ್ದು, ಕಳ್ಳ ಪರಾರಿಯಾಗಿದ್ದಾನೆ.

- Advertisement -

Latest News

error: Content is protected !!