ಬೆಳ್ತಂಗಡಿ : ಭಾರೀ ಗಾಳಿ ಮಳೆಗೆ ಬಾಡಿಗೆ ನೀಡಿದ ಮನೆಯೊಂದರ ಮೇಲ್ಛಾವಣಿ ಸಂಪೂರ್ಣ ಹಾನಿಯಾಗಿದ್ದು. ಮನೆಯೊಳಗಿದ್ದ ವೃದ್ಧ ದಂಪತಿ ಸೇರಿ ನಾಲ್ಕು ಜನ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳ್ತಂಗಡಿಯ ಲಾಯಿಲದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿನ್ನಿಕಲ್ಲು ನಿವಾಸಿ ಜೊಕ್ಕಿಂ ಸ್ವೀಕೇರಾ ಎಂಬವರಿಗೆ ಸೇರಿದ ಮೂರು ಬಾಡಿಗೆ ಮನೆಯೊಂದಕ್ಕೆ ಜುಲೈ 3 ರಂದು ಸಂಜೆ ಬಂದ ಭಾರೀ ಗಾಳಿ ಮಳೆಗೆ ಮೇಲ್ಛಾವಣಿ ಹಾರಿಹೋಗಿ ಮನೆಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ. ಬಾಡಿಗೆ ರೂಂನಲ್ಲಿದ್ದ ಕೇರಳ ಮೂಲದ ಪತಿ ಜೈಯ್ ಮೂನ್ (48) ಪತ್ನಿ ಸುನು(40) ಹಾಗೂ ಪಕ್ಕದ ಬಾಡಿಗೆ ರೂಂನಲ್ಲಿದ್ದ ಕೇರಳ ಮೂಲದ ಪತಿ ಜಾನ್ಸನ್ (60) ಪತ್ನಿ ಓಮನಾ (50) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ, ಗ್ರಾಮ ಆಡಳಿತಾಧಿಕಾರಿ ರೇನಿತಾ, ಗ್ರಾಮ ಪಂಚಾಯತ್ ಲೆಕ್ಕಸಹಾಯಕಿ ಸುಪ್ರಿತಾ ಮತ್ತು ಸ್ಥಳೀಯ ಯುವಕರ ತಂಡ ಹಾಗೂ ಬೆಳ್ತಂಗಡಿ ಪ್ರವಾಹ ರಕ್ಷಣಾ ತಂಡದಲ್ಲಿರುವ ಗೃಹರಕ್ಷಕ ದಳದ ಯುನಿಟ್ ಅಧಿಕಾರಿ ಜಯಾನಂದ ಹಾಗೂ ಸಿಬ್ಬಂದಿ ಚಾಕೊ.ಕೆ.ಜೆ ವಿನೋದ್ ರಾಜ್, ಚಂದ್ರಶೇಖರ್ ಬಂದು ಮನೆಯಲ್ಲಿದ್ದ ವಸ್ತುಗಳನ್ನು ಹೊರತೆಗೆಯುವ ಕಾರ್ಯಾಚರಣೆಗೆ ಸಹಕರಿಸಿದರು
