Friday, June 5, 2026
Homeತಾಜಾ ಸುದ್ದಿನೂತನ ಕಾಂಗ್ರೆಸ್ ಅಧ್ಯಕ್ಷರಿಗೆ ಪೂರ್ತಿ ಸ್ವಾತಂತ್ರ್ಯವಿದೆ: ಗಾಂಧಿ ಕುಟುಂಬದವರು ಯಾರೂ ರಿಮೋಟ್ ಕಂಟ್ರೋಲ್ ಮಾಡಲ್ಲ: ರಾಹುಲ್‌...

ನೂತನ ಕಾಂಗ್ರೆಸ್ ಅಧ್ಯಕ್ಷರಿಗೆ ಪೂರ್ತಿ ಸ್ವಾತಂತ್ರ್ಯವಿದೆ: ಗಾಂಧಿ ಕುಟುಂಬದವರು ಯಾರೂ ರಿಮೋಟ್ ಕಂಟ್ರೋಲ್ ಮಾಡಲ್ಲ: ರಾಹುಲ್‌ ಗಾಂಧಿ

- Advertisement -
- Advertisement -

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ನೂತನ ಅಧ್ಯಕ್ಷರಾಗಿ ಯಾರೇ ಆಯ್ಕೆಯಾದರೂ ಅವರು ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಂಘಟನೆಯನ್ನು ನಡೆಸಲು ಸ್ವತಂತ್ರರಾಗಿರುತ್ತಾರೆ. ಅವರನ್ನು ಗಾಂಧಿ ಕುಟುಂಬದವರು ಯಾರೂ ರಿಮೋಟ್ ಕಂಟ್ರೋಲ್ ಮಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಪಕ್ಷದ ‘ಭಾರತ್ ಜೋಡೋ ಯಾತ್ರೆ’ಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿರುವ ರಾಹುಲ್‌ ಗಾಂಧಿ ಇಂದು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಇಬ್ಬರೂ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದಾರೆ. ಅವರನ್ನು ‘ರಿಮೋಟ್ ಕಂಟ್ರೋಲ್’ ಎಂದು ಕರೆಯುವುದು ಅವರಿಬ್ಬರಿಗೂ ಮಾಡುವ ಅವಮಾನವಾಗಿದೆ. ಅವರ ಅಧಿಕಾರದಲ್ಲಿ ನಮ್ಮ ಕುಟುಂಬದ ಯಾರೂ ತಲೆಹಾಕುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

Latest News

error: Content is protected !!