ಬೆಳ್ತಂಗಡಿ: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಈಗಾಗಲೇ ಪ್ರಾರಂಭವಾಗಿದ್ದು ಡಿ.ಪಿ.ಜೈನ್ ಕನ್ಸ್ಟ್ರಕ್ಷನ್ಸ್ ಗುತ್ತಿಗೆಯನ್ನು ಪಡೆದುಕೊಂಡು ಕಾಮಗಾರಿಯನ್ನು ಪ್ರಾರಂಭಿಸಿದರೂ ಹಲವಾರೂ ಅವ್ಯವಸ್ಥೆಗಳಿಂದ ರಸ್ತೆಯಲ್ಲಿ ಸಂಚಾರ ಮಾಡದಂತಹ ಸ್ಥಿತಿದ ನಿರ್ಮಾಣವಾಗಿದೆ. ಅದರ ಬೆನ್ನಲ್ಲೇ ಡಿ.ಪಿ. ಜೈನ್ ಕಂಪನಿಯ ಕಾರ್ಮಿಕರು ಸಂಬಳ ನೀಡಿಲ್ಲ ಎಂದು ಪ್ರತಿಭಟನೆಯನ್ನು ಮಾಡುತ್ತಿದ್ದು, ಇದರಿಂದ ಮತ್ತಷ್ಟು ಸಮಸ್ಯೆಗಳು ಎದುರಾಗಿದ್ದವು. ಇದರ ಬೆನ್ನಲ್ಲೇ ಮುಂದಿನ ಕಾಮಗಾರಿಯ ಜವಾಬ್ದಾರಿಯನ್ನು ಮೊಗ್ರೋಡಿ ಕನ್ ಸ್ಟ್ರಕ್ಷನ್(MCK) ಅವರಿಗೆ ನೀಡುವ ಮಾತುಕತೆಗಳು ಬೆಂಗಳೂರಿನ ವಿಕಾಸ ಸೌಧದಲ್ಲಿ ಆ.8 ರಂದು ಡಿ.ಪಿ.ಜೈನ್ ಮಾಲೀಕ , ಮೊಗ್ರೋಡಿ ಕನ್ ಸ್ಟ್ರಕ್ಷನ್ ಮಾಲೀಕರು , ಬೆಳ್ತಂಗಡಿ ಶಾಸಕರು, ಸಚಿವರ ನೇತೃತ್ವದಲ್ಲಿ ನಡೆಯಿತು.

ಕಳೆದ ಕೆಲವು ಸಮಯಗಳಿಂದ ಈ ರಸ್ತೆಯ ಕಾಮಗಾರಿಯ ಗುತ್ತಿಗೆ ಪಡೆದಿದ್ದ ಡಿ.ಪಿ.ಜೈನ್ ಅವರು ಅವ್ಯವಸ್ಥಿತ ರೀತಿಯಲ್ಲಿ ಕಾಮಗಾರಿ ನಿರ್ವಹಿಸಿದ ಪರಿಣಾಮ ಮಳೆ ಪ್ರಾರಂಭದ ನಂತರ ಈ ರಸ್ತೆ ಹೊಂಡ ಗುಂಡಿಗಳಿಂದ ವಾಹನ ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೇ ಕಂಪನಿ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂಬ ಕಾರಣವೊಡ್ಡಿ ಕಂಪನಿ ವಿರುದ್ಧ ಕಾರ್ಮಿಕರು ಪ್ರತಿಭಟನೆ ನಡೆಸಿ ಕೆಲಸ ಸ್ಥಗಿತಗೊಳಿಸಿದ್ದರು. ಇದರಿಂದ ಕಾಮಗಾರಿ ನಿರ್ವಹಿಸಲು ಕಾರ್ಮಿಕರ ಕೊರತೆಯಿಂದ ಕಳೆದ ಕೆಲವು ದಿನಗಳಿಂದ ಕೆಲಸ ಸ್ಥಗಿತಗೊಂಡಿತ್ತು.

ಸಾರ್ವಜನಿಕರು ಹಾಗೂ ಅಧಿಕಾರಿಗಳು ಕಾಮಗಾರಿಯ ಬಗ್ಗೆ ಅಸಾಮಾಧಾನಗೊಂಡಿದ್ದರಲ್ಲದೆ ಅಧಿಕಾರಿಗಳಲ್ಲಿ ಸರಿಯಾದ ಕ್ರಮ ಕೈಗೊಳ್ಳಲು ಒತ್ತಡ ಹಾಕಿದ್ದರು ಹಾಗೂ ಅಧಿಕಾರಿಗಳೂ ಕೂಡ ನಿಧಾನಗತಿ ಹಾಗೂ ಅಸಮರ್ಪಕ ಕೆಲಸದ ಬಗ್ಗೆ ಅಸಾಮಾಧಾನಗೊಂಡಿದ್ದರು. ಈ ಎಲ್ಲ ಬೆಳವಣಿಗೆಯ ನಂತರ ಅಧಿಕಾರಿಗಳು ಡಿ.ಪಿ. ಜೈನ್ ಕಂಪನಿ ಕಾಮಗಾರಿಯನ್ನು ಮೊಗ್ರೋಡಿ ಕನ್ಸ್ ಸ್ಟ್ರಕ್ಸನ್ಸ್ (MCK) ಅವರಿಗೆ ಆ.8 ರಂದು ಮಾತುಕತೆ ನಡೆಸಿ ಲೆಕ್ಕಚಾರ ನಡೆಸಿ ಇನ್ನೂ ಮುಂದೆ ಕಾಮಗಾರಿ ನಡೆಸಲು ಕಾನೂನು ಪ್ರಕಾರ ಡಿ.ಪಿ.ಜೈನ್ ಕೈಯಿಂದ MCK ಯವರಿಗೆ ನೀಡಲಾಗಿದೆ. MCK ಕಂಪನಿಯವರು ರಾಷ್ಟ್ರೀಯ ಹೆದ್ದಾರಿ ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆಯ ಕಾಮಗಾರಿಯನ್ನು ಇಂದಿನಿಂದ ಪ್ರಾರಂಭಿಸಲಿದ್ದಾರೆ.
