Friday, April 19, 2024
Homeಕರಾವಳಿಉಡುಪಿಕಾರ್ಕಳ: ರಸ್ತೆಗೆ ನಾಥರಾಮ್ ಗೋಡ್ಸೆ ಹೆಸರು: ನಾಮಫಲಕ ತೆರವುಗೊಳಿಸಿದ ಗ್ರಾಮ ಪಂಚಾಯತ್‌

ಕಾರ್ಕಳ: ರಸ್ತೆಗೆ ನಾಥರಾಮ್ ಗೋಡ್ಸೆ ಹೆಸರು: ನಾಮಫಲಕ ತೆರವುಗೊಳಿಸಿದ ಗ್ರಾಮ ಪಂಚಾಯತ್‌

spot_img
- Advertisement -
- Advertisement -

ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆಯೊಂದಕ್ಕೆ ನಾಥರಾಮ್ ಗೋಡ್ಸೆ ಹೆಸರು ಇಡಲಾಗಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ. ಬೋಳ ಗ್ರಾಮ ಪಂಚಾಯತ್ ಬಳಿಯಿರುವ ರಸ್ತೆಗೆ ‘ಪಡುಗಿರಿ ನಾಥರಾಮ್ ಗೋಡ್ಸೆ ರಸ್ತೆ’ ಎಂದು ನಾಮಫಲಕ ಹಾಕಲಾಗಿದೆ. ಈ ವಿಚಾರ ವಿವಾದಕ್ಕೆ ಕಾರಣವಾಗಿದ್ದು, ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ಥಳೀಯ ಶಾಸಕ, ಸಚಿವ ಸುನೀಲ್ ಕುಮಾರ್, “ಇದು ಪಂಚಾಯತ್ ನಿಂದ ಅಧಿಕೃತವಾಗಿ ಹಾಕಲಾದ ನಾಮಫಲಕವಲ್ಲ. ಖಾಸಗಿಯವರು ಹಾಕಿದ್ದಾರೆ. ಈ ಬಗ್ಗೆ ಪಂಚಾಯತ್ ನವರು ಪರಿಶೀಲಿಸಿ ಅಧಿಕೃತ ವಸ್ತುಸ್ಥಿತಿಯನ್ನು ಸಾರ್ವಜನಿಕರ ಮುಂದಿಡುತ್ತಾರೆ” ಎಂದರು. ಇನ್ನು ಘಟನೆ ವಿವಾದ ರೂಪ ಪಡೆಯುತ್ತಿದ್ದಂತೆ ಎಚ್ಚೆತ್ತ ಗ್ರಾಮ ಪಂಚಾಯತ್ ನಾಮಫಲಕ ತೆರವು ಮಾಡಿದೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣೆ ಎಸ್ ಐ ತೇಜಸ್ವಿ ಭೇಟಿ ನೀಡಿದ್ದಾರೆ.

.

- Advertisement -
spot_img

Latest News

error: Content is protected !!