Thursday, June 4, 2026
Homeತಾಜಾ ಸುದ್ದಿಮಣಿಪುರದಲ್ಲಿ ಇಂದು ಮೊದಲ ಹಂತದ ಚುನಾವಣೆ ಆರಂಭ- 38 ಕ್ಷೇತ್ರಗಳಲ್ಲಿ 173 ಅಭ್ಯರ್ಥಿಗಳ ಭವಿಷ್ಯ ಇಂದು...

ಮಣಿಪುರದಲ್ಲಿ ಇಂದು ಮೊದಲ ಹಂತದ ಚುನಾವಣೆ ಆರಂಭ- 38 ಕ್ಷೇತ್ರಗಳಲ್ಲಿ 173 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

- Advertisement -
- Advertisement -

ಮಣಿಪುರ: ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಬಿಷ್ಣುಪುರ್, ಚುರಾಚಂದ್‌ಪುರ ಮತ್ತು ಕಾಂಗ್‌ಪೋಕ್ಪಿ ಸೇರಿದಂತೆ ಮಣಿಪುರದ ಐದು ಜಿಲ್ಲೆಗಳಲ್ಲಿ ಇಂದು ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 4ರವರೆಗೆ ನಡೆಯಲಿದೆ.

ಕೋವಿಡ್ ಪಾಸಿಟಿವ್ ಅಥವಾ ಕ್ವಾರಂಟೈನ್‌ನಲ್ಲಿರುವ ಮತದಾರರಿಗೆ ಕೊನೆಯ ಗಂಟೆಯಲ್ಲಿ ಅಂದರೆ, ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.

ಮೊದಲ ಹಂತದ ಮತದಾನದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗಳನ್ನು ತಲುಪಿದ್ದಾರೆ. ಅಸ್ಸಾಂ ಮತ್ತು ಮಣಿಪುರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿ ಇದ್ದಾರೆ, ಸುಗಮ ಮತದಾನವನ್ನು ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷ ಡಾ. ಸೈಯದ್ ಅಹ್ಮದ್ ಹೇಳಿದರು.

ಐದು ಜಿಲ್ಲೆಗಳಲ್ಲಿ ವ್ಯಾಪಿಸಿರುವ 38 ಕ್ಷೇತ್ರಗಳು ಇಂದು ವಿಧಾನಸಭಾ ಚುನಾವಣೆಯ ಕಣದಲ್ಲಿ 15 ಮಹಿಳೆಯರು ಸೇರಿದಂತೆ 173 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿವೆ.

ಬಿಜೆಪಿ ಮತ್ತು ಕಾಂಗ್ರೆಸ್ ಅಲ್ಲದೆ, ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಕೂಡ ಈ ಬಾರಿ ಕಣದಲ್ಲಿದ್ದು, 38 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

- Advertisement -

Latest News

error: Content is protected !!