Sunday, June 30, 2024
Homeಉದ್ಯಮಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ; ಡಿಎನ್.ಎ ವರದಿಯಿಂದ ಹೊರಬಿದ್ದ ಸತ್ಯ

ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ; ಡಿಎನ್.ಎ ವರದಿಯಿಂದ ಹೊರಬಿದ್ದ ಸತ್ಯ

spot_img
- Advertisement -
- Advertisement -

ಮುಂಬಯಿ: ಆನ್ ಲೈನ್ ಮೂಲಕ ಇತ್ತೀಚಿಗೆ ಮುಂಬಯಿ ಮೂಲದ ವೈದ್ಯೆಯೊಬ್ಬರು ಐಸ್ ಕ್ರೀಮ್ ಆರ್ಡರ್ ಮಾಡಿದ್ದು, ಅದರಲ್ಲಿ ಮಾನವನ ಬೆರಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

ಈ ಕುರಿತಂತೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳಿನ ಡಿಎನ್ ಎ ಪರೀಕ್ಷೆ ನಡೆಸಿದ್ದು ಇದೀಗ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದೆ.

ಪೊಲೀಸರು ಮೊದಲು ನೀಡಿದ ಮಾಹಿತಿಯಂತೆ ಪುಣೆಯಲ್ಲಿರುವ ಐಸ್ ಕ್ರೀಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಯುವಕನ ಬೆರಳು ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಅದರಂತೆ ಯುವಕನನ್ನು ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಮತ್ತು ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳಿನ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು. ಇದೀಗ ಎರಡು ವರದಿ ಬಂದಿದ್ದು ಐಸ್ ಕ್ರೀಮ್ ನಲ್ಲಿ ಪತ್ತೆಯಾದ ಬೆರಳು ಪುಣೆಯ ಐಸ್ ಕ್ರೀಮ್ ಫ್ಯಾಕ್ಟರಿ ಯಲ್ಲಿ ಕೆಲಸ ಮಾಡುತ್ತಿದ್ದ ಯುವನದ್ದೇ ಎಂಬುದು ಸಾಭೀತಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿ ಫ್ಯಾಕ್ಟರಿ ಪರಿಶೀಲನೆಗೆ ಹೋಗಿದ್ದ ಪೊಲೀಸರಿಗೆ ಅಲ್ಲಿ ಕೆಲಸ ಮಾಡುವ ಯುವಕನ ಕೈ ಬೆರಳಿಗೆ ಗಾಯವಾಗಿರುವ ಮಾಹಿತಿ ಲಭ್ಯವಾಗಿತ್ತು. ಅದರ ಆಧಾರದಲ್ಲಿ ಡಿಎನ್ ಎ ಪರೀಕ್ಷೆ ನಡೆಸಿದಾಗ ವರದಿಯಲ್ಲಿ ಎರಡೂ ಹೊಂದಾಣಿಕೆಯಾಗಿದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!