Thursday, June 25, 2026
Homeಅಪರಾಧನೋಟಿನ ಮಾಲೆಗಾಗಿ ಕಳ್ಳನ ಹಿಂದೆ ಓಡಿದ ಮದುಮಗ; ಹೀಗೊಂದು ವಿಚಿತ್ರ ಘಟನೆ ಇಲ್ಲಿದೆ ನೋಡಿ

ನೋಟಿನ ಮಾಲೆಗಾಗಿ ಕಳ್ಳನ ಹಿಂದೆ ಓಡಿದ ಮದುಮಗ; ಹೀಗೊಂದು ವಿಚಿತ್ರ ಘಟನೆ ಇಲ್ಲಿದೆ ನೋಡಿ

- Advertisement -
- Advertisement -

ಮದುವೆ ಸಂಭ್ರಮದ ಖುಷಿಯಲ್ಲಿದ್ದ ವರ ಕುದುರೆ ಏರಿ ಕೊರಳಿಗೆ ನೋಟಿನ ಹಾರ ಹಾಕಿಕೊಂಡು ದೇವಸ್ಥಾನದ ಕಡೆಗೆ ಮೆರವಣಿಗೆಯಲ್ಲಿ ಬರುತ್ತಿದ್ದ ವೇಳೆ, ಕಳ್ಳನೊಬ್ಬ ವರನ ಕತ್ತಿನಲ್ಲಿದ್ದ ನೋಟಿನ ಹಾರದಲ್ಲಿ ಒಂದು ನೋಟನ್ನು ಎಗರಿಸಿ ಪರಾರಿಯಾದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೀರತ್‌ನ ದಂಗರ್‌ವಾಲಿಯಲ್ಲಿ ನಡೆದ ಈ ವಿಚಿತ್ರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವರನು ತನ್ನ ಕುಟುಂಬ ಸದಸ್ಯರ ಜೊತೆಗೆ ಕುದುರೆ ಏರಿ ದೇವಸ್ಥಾನದತ್ತ ಬರುತ್ತಿದ್ದಾಗ, ವ್ಯಕ್ತಿಯೋರ್ವನು ವರನ ಬಳಿ ತೆರಳಿ ಆತನ ಕತ್ತಿನಲ್ಲಿದ್ದ ನೋಟಿನ ಮಾಲೆಯಲ್ಲಿ ಒಂದು ನೋಟನ್ನು ಎಗರಿಸಿ ಓಡಿದ್ದಾನೆ. ಆಗ ವರನು ಸಿಟ್ಟಿಗೆದ್ದು, ಸಿನಿಮಾ ಶೈಲಿಯಂತೆ ಆತನನ್ನು ಹಿಂಬಾಲಿಸಲು ಶುರು ಮಾಡಿದ್ದಾನೆ. ಅಷ್ಟೋತ್ತಿಗಾಗಲೇ ಕಳ್ಳ ಅಲ್ಲಿದ್ದ ಗೂಡ್ಸ್ ವಾಹನ ಏರಿ ಹೊರಟಿದ್ದು, ವರನು ಓಡಿ ಹೋಗಿ ಗೂಡ್ಸ್ ವಾಹನದ ಹಿಂಬದಿಯಿಂದ ವಾಹನವನ್ನು ಹತ್ತಿದ್ದಾನೆ ಬಳಿಕ ವಾಹನ ಚಲಿಸುತ್ತಿದ್ದಂತೆ ಎಡಭಾಗದಲ್ಲಿ ವಾಹನದ ಕಿಟಕಿಯ ಮೂಲಕ ವಾಹನದೊಳಗೆ ಪ್ರವೇಶಿಸಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಈ ವೇಳೆ ಗಾಡಿಯನ್ನು ನಿಲ್ಲಿಸಿ ಓಡಲೆತ್ನಿಸಿದ ಚಾಲಕನನ್ನು ಹಿಡಿದು ಹಾಕಿ ಸರಿಯಾಗಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ಸಂದರ್ಭದಲ್ಲಿ ಕಳ್ಳ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ನಂತರದಲ್ಲಿ ವರನು ಆತನನ್ನು ಬಿಟ್ಟು ಮದುವೆ ಹಾಲ್ ಗೆ ಬಂದು ಮದುವೆ ವಿಧಿ ವಿಧಾನಗಳಲ್ಲಿ ಪಾಲ್ಗೊಂಡಿದ್ದಾನೆ.

- Advertisement -

Latest News

error: Content is protected !!