Sunday, May 5, 2024
Homeತಾಜಾ ಸುದ್ದಿವರನಿಗೆ ಭಾರತದ ಪ್ರಧಾನಿ ಹೆಸರು ಗೊತ್ತಿಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡಿದ ವಧು

ವರನಿಗೆ ಭಾರತದ ಪ್ರಧಾನಿ ಹೆಸರು ಗೊತ್ತಿಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡಿದ ವಧು

spot_img
- Advertisement -
- Advertisement -

ಉತ್ತರಪ್ರದೇಶ; ವರನಿಗೆ ಭಾರತದ ಪ್ರಧಾನಿ ಹೆಸರು ಗೊತ್ತಿಲ್ಲ ಎಂದು ವಧು ಮದುವೆ ಕ್ಯಾನ್ಸಲ್ ಮಾಡಿದ ವಿಚಿತ್ರ ಘಟನೆ  ಉತ್ತರ ಪ್ರದೇಶದ ಗಾಜಿಪುರದ ನಾಸಿರ್‌ಪುರ ಗ್ರಾಮದಲ್ಲಿ ನಡೆದಿದೆ.ವರನಿಗೆ ದೇಶದ ಪ್ರಧಾನಿ ಯಾರೆಂದು ಗೊತ್ತಿಲ್ಲ ಎಂಬ ಕಾರಣಕ್ಕೆ ವಧು ತಾನು ಮದುವೆಯಾಗಬೇಕಿದ್ದ ಹುಡುಗ ತನಗೆ ಬೇಡವೆಂದು ಕೋಪದಿಂದ ಅಲ್ಲಿದ್ದ ವರನ ಕಿರಿಯ ಸಹೋದರನನ್ನೇ ಮದುವೆಯಾಗಿದ್ದಾಳೆ.

ಉತ್ತರ ಪ್ರದೇಶದ ನಸೀರಪುರ ಗ್ರಾಮದ ಶಿವಶಂಕರರಾಮ ಅವರು ಕರಂಡದ ಬಸಂತ್ ಪಟ್ಟಿಯಲ್ಲಿರುವ ಯುವತಿಯೊಂದಿಗೆ ವಿವಾಹವಾಗಬೇಕಿತ್ತು. ಅದರಂತೆ ಜೂನ್ 11ರಂದು ಹಿಂದೂ ಸಂಪ್ರದಾಯಗಳ ಪ್ರಕಾರ ಮದುವೆಗೆ ದಿನಾಂಕ ನಿಗದಿಪಡಿಸಲಾಗಿತ್ತು.ಮರುದಿನ ವಿವಾಹದ ಕಾರ್ಯಕ್ರಮಗಳು ನೆರವೇರುತ್ತಿದ್ದಾಗ ವಧು ವರನ ಬಳಿ ಮಾತನಾಡುತ್ತಾ ನಮ್ಮ ದೇಶದ ಪ್ರಧಾನಿ ಯಾರು ಎಂದು ಕೇಳಿದ್ದಾಳೆ. ಆದರೆ ಶಿವಶಂಕರನಿಗೆ ಆ ಪ್ರಶ್ನೆಗೆ ಉತ್ತರಿಸಲಾಗಲಿಲ್ಲ. ಅಲ್ಲಿದ್ದವರೆಲ್ಲ ಶಿವಶಂಕರ್ ಅವರನ್ನು ಗೇಲಿ ಮಾಡಲು ಆರಂಭಿಸಿದ್ದಾರೆ. ‘ಪ್ರಧಾನಿ ಹೆಸರು ಗೊತ್ತಿಲ್ಲದಿದ್ದರೆ ಹೇಗೆ?’ ಎಂದು ನಿಂದಿಸಿದ್ದಾರೆ, ಇದನ್ನೇ ದೊಡ್ಡ ಅವಮಾನ ಎಂದು ಪರಿಗಣಿಸಿದ ಪತ್ನಿ ಶಿವಶಂಕರ್ ಅವರನ್ನು ತೊರೆದು ಅವರ ಕಿರಿಯ ಸಹೋದರ ಅನಂತ್ ಅವರನ್ನು ಸ್ಥಳದಲ್ಲೇ ಮದುವೆಯಾಗಿದ್ದಾಳೆ.

ಇತ್ತ ಘಟನೆ ಕುರಿತು ಪೊಲೀಸ್ ದೂರು ದಾಖಲಿಸುವುದಾಗಿ ವರನ ತಂದೆ ತಿಳಿಸಿದ್ದಾರೆ. ಯಾವುದೇ ಕಡೆಯಿಂದ ನಮಗೆ ದೂರು ಬಂದಿಲ್ಲ ಎಂದು ಪೊಲೀಸ್ ಅಧಿಕಾರಿ ಸೈದ್‌ಪುರ್ ಕೊತ್ವಾಲ್ ವಂದನಾ ಸಿಂಗ್ ಹೇಳಿದ್ದಾರೆ. ದೂರು ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯುವಕನೊಬ್ಬ ಠಾಣೆಗೆ ಬಂದು ಪ್ರಧಾನಿ ಹೆಸರು ಗೊತ್ತಿಲ್ಲದ ಕಾರಣ ತನ್ನ ಮದುವೆ ನಿಲ್ಲಿಸಲಾಗಿದೆ ಎಂದು ಹೇಳಿದ್ದಾನೆ. ಈ ಬಗ್ಗೆ ಲಿಖಿತ ದೂರು ಬಂದ ನಂತರ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೊತ್ವಾಲ್ ಸಿಂಗ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!