Wednesday, June 3, 2026
Homeಆರಾಧನಾವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಸಂಪನ್ನ

ವಡ್ಡರ್ಸೆ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ ಸಂಪನ್ನ

- Advertisement -
- Advertisement -

ಕೋಟ: ಇಲ್ಲಿನ ಮಹಾತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನ ವಡ್ಡರ್ಸೆಯ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.16 ರಿಂದ 18ರ ವರೆಗೆ ಹಮ್ಮಿಕೊಂಡಿದ್ದು, ಜಾತ್ರೆಯು ಅದ್ದೂರಿಯಾಗಿ ನೆರವೇರಿತು.

ಜಾತ್ರೆಯ ಪ್ರಯುಕ್ತ ದೇವಸ್ಥಾನದಲ್ಲಿ ಮಾ.16 ರಂದು ಬ್ರಹ್ಮರಥೋತ್ಸವವು ನಡೆಯಿತು. ಮಾ.17ರಂದು ತುಲಾಭಾರ ಸೇವೆ, ರಾತ್ರಿ ಓಕುಳಿ ಆಟ, ಕಟ್ಟೆ ಪೂಜೆ ನಡೆಯಿತು. ಮಾ.18 ರಂದು ಬಸವನ‌ ಕಾಣಿಕೆ ನೆರವೇರಿತು. ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಿದ್ದರು. ಬಸವನ ಕಾಣಿಕೆ ಪ್ರಯುಕ್ತ ಮಹಾಲಿಂಗೇಶ್ವರ ಪರಿವಾರ ದೇವರಿಗೆ ವಿಶೇಷ ಪೂಜೆ, ಅಪರಾಹ್ನ ಅನ್ನಸಂತಪರ್ಣೆ ನಡೆದಿದ್ದು, ಈ ಎಲ್ಲ ಕಾರ್ಯಕ್ರಮಗಳ ನೇತೃತ್ವವನ್ನು ದೇಗುಲದ ಆಡಳಿತ ಮೊಕ್ತೇಸರ ಕೊತ್ತಾಡಿ ಉದಯ ಕುಮಾರ್ ಶೆಟ್ಟಿ ವಹಿಸಿದ್ದರು. ನೂರಾರು ಮಂದಿ ಭಕ್ತಾಧಿಗಳು ಬಸವನ ಕಾಣಿಕೆ ಅರ್ಪಸಿ, ಪ್ರಸಾದ ಸ್ವೀಕರಿಸಿದರು. ಗ್ರಾಮಸ್ಥರು ಹಾಗೂ ಭಕ್ತಾಧಿಗಳು ಸಹಕರಿಸಿದರು.

- Advertisement -

Latest News

error: Content is protected !!