Wednesday, October 14, 2026
Homeಕರಾವಳಿಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿ ಮುಂಬೈನಲ್ಲಿ ಸೆರೆ

ಮಂಗಳೂರು: ತಲೆಮರೆಸಿಕೊಂಡಿದ್ದ ಆರೋಪಿ ಮುಂಬೈನಲ್ಲಿ ಸೆರೆ

- Advertisement -
- Advertisement -

ಮಂಗಳೂರು: ನಗರದಲ್ಲಿ ನಡೆದ ಗಲಭೆಯೊಂದರ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.

ಅಡ್ಯಾರ್‌ ಬಳಿಯ ವಳಚ್ಚಿಲ್‌ನ ರೈಲ್ವೆ ಗೇಟ್‌ ಬಳಿ ನಿವಾಸಿ ನವಾಝ್‌ ಷರೀಫ್‌ ಬಂಧಿತ ಆರೋಪಿ.

ಎನ್‌ಆರ್‌ಸಿ, ಸಿಎಎ ಕಾಯ್ದೆ ವಿರೋಧಿಸಿ ೨೦೨೦ ರಲ್ಲಿ ನಡೆದ ಗಲಭೆ ಸಂಬಂಧ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ದುಬೈನಿಂದ ಮುಂಬೈಗೆ ಬರ್ತಿರೋ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆಂದು ತಿಳಿದುಬಂದಿದೆ.

- Advertisement -

Latest News

error: Content is protected !!