Saturday, May 18, 2024
Homeಕ್ರೀಡೆವಿಶ್ವದ ನಂಬರ್ 1 ಟೆನಿಸ್ ತಾರೆ ನೋವಾಕ್ ಜೋಕೊವಿಚ್ ಗೂ ಕೊರೋನಾ!

ವಿಶ್ವದ ನಂಬರ್ 1 ಟೆನಿಸ್ ತಾರೆ ನೋವಾಕ್ ಜೋಕೊವಿಚ್ ಗೂ ಕೊರೋನಾ!

spot_img
- Advertisement -
- Advertisement -

ಬೆಲ್‌ಗ್ರೇಡ್: ವರ್ಲ್ಡ್​ ನಂಬರ್ 1 ಟೆನಿಸ್ ಆಟಗಾರ ಸೆರ್ಬಿಯಾದ ನೊವಾಕ್ ಜೋಕೊವಿಕ್​ಗೆ ಕೊರೊನಾ ಪಾಸಿಟಿವಿ ದೃಢವಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೆ ಕ್ರೊಯೇಷಿಯಾದ ಬೊರ್ನಾ ಕೋರಿಕ್, ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಮತ್ತು ವಿಕ್ಟರ್ ಟ್ರಾಯ್ಕಿಗೆ ಕೊರೊನಾ ಸೋಂಕು ತಗುಲಿತ್ತು.

ವಿಶ್ವ ಟೆನಿಸ್ ಸಂಸ್ಥೆ ಕೋವಿಡ್-19 ಭೀತಿಯಿಂದ ಪಂದ್ಯಾವಳಿಯನ್ನು ರದ್ದು ಗೊಳಿಸಿತ್ತು. ಕ್ರೀಡೆಯನ್ನು ಉತ್ತೇಜಿಸಲು ಮತ್ತು ಅಗತ್ಯವಿರುವವರಿಗೆ ಹಣವನ್ನು ಸಂಗ್ರಹಿಸಲು ಜೊಕೊವಿಕ್ ಆಡ್ರಿಯಾ ಟೂರ್ ಟೆನಿಸ್ ಪಂದ್ಯಾವಳಿಯನ್ನು ಆಯೋಜಿಸಿದರು.

ಆಡ್ರಿಯಾ ಟೂರ್ ಎಕ್ಸಿಬಿಷನ್ ಟೂರ್ನಿ ಮುಗಿಸಿ ಜೋಕೊವಿಕ್ ​ತವರಿಗೆ ವಾಪಸಾಗಿದ್ರು. ಸ್ವದೇಶಕ್ಕೆ ಮರಳಿದ ತಕ್ಷಣ ಜೋಕೊವಿಕ್​ರನ್ನ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಜೋಕೊವಿಕ್​ಗೆ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡಿಲಿಲ್ಲ. ಆದ್ರೂ ಪಾಸಿಟಿವ್ ವರದಿ ಬಂದಿದೆ.

ಜೊಕೊವಿಕ್ ಪತ್ನಿ ಜೆಲೆನಾಗೂ ಕೊರೋನಾ ಪಾಸಿಟಿವ್ ಬಂದಿದ್ದೂ ಮಕ್ಕಳ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ. 

ಸದ್ಯ ಜೋಕೊವಿಕ್ 14 ದಿನಗಳ ಕಾಲ ಸೆಲ್ಫ್-ಐಸೋಲೇಷನ್​ನಲ್ಲಿ ಇರಲಿದ್ದಾರೆ. 5 ದಿನಗಳಿಗೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ ಅಂತ ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!