Thursday, May 2, 2024
HomeWorldಅಮೇರಿಕದಲ್ಲಿ ನಡೆದ ಶೂಟೌಟ್​ಗೆ ಬಲಿಯಾದ ಭಾರತದ ಟೆಕ್ಕಿ; 26ರ ಹರೆಯದ ನಕ್ಕಾ ಸಾಯಿ ಚರಣ್ ಹತ್ಯೆ

ಅಮೇರಿಕದಲ್ಲಿ ನಡೆದ ಶೂಟೌಟ್​ಗೆ ಬಲಿಯಾದ ಭಾರತದ ಟೆಕ್ಕಿ; 26ರ ಹರೆಯದ ನಕ್ಕಾ ಸಾಯಿ ಚರಣ್ ಹತ್ಯೆ

spot_img
- Advertisement -
- Advertisement -

ವಾಷಿಂಗ್ಟನ್: ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬೊಲ್ಟಿಮೋರ್ ನಗರದಲ್ಲಿ ನಡೆದ ಶೂಟೌಟ್​ಗೆ ತೆಲಂಗಾಣದ ಸಾಫ್ಟ್‌ವೇರ್ ಇಂಜಿನಿಯರ್ ಬಲಿಯಾಗಿದ್ದಾನೆ. ಆತನನ್ನು ವಾಹನದಲ್ಲೇ ಗುಂಡು ಹಾರಿಸಿ ಹತ್ಯೆಗೈಯಲಾಗಿದೆ.

ಮೃತಪಟ್ಟ ವ್ಯಕ್ತಿಯನ್ನು ನಕ್ಕಾ ಸಾಯಿ ಚರಣ್ (26)ಎಂದು ಗುರುತಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಚರಣ್ ಬಾಲ್ಟಿಮೋರ್‌ನಲ್ಲಿ ಕೆಲಸ ಮಾಡುತ್ತಿದ್ದರು. ತನ್ನ ಸ್ನೇಹಿತನನ್ನು ವಿಮಾನ ನಿಲ್ದಾಣದಲ್ಲಿ ಇಳಿಸಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಹತ್ಯೆ ಮಾಡಿದ ವ್ಯಕ್ತಿ ಇನ್ನೂ ಪತ್ತೆ ಆಗಿಲ್ಲ.

ಗಾಯಗೊಂಡ ಚರಣ್ ತನ್ನ ಕಾರಿನಲ್ಲಿ ಮಲಗಿದ್ದರು. ಈ ಹಿನ್ನೆಲೆಯಲ್ಲಿ ಯುವಕನನ್ನು ಆರ್.ಆಡಮ್ಸ್ ಕೌಲಿ ಶಾಕ್ ಟ್ರಾಮಾ ಸೆಂಟರ್‌ಗೆ ರವಾನಿಸಲಾಯಿತು. ಆದರೆ ಚರಣ್ ತಲೆಗೆ ಗುಂಡೆಟು ತಗುಲಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 

ನ್ನೂ ಭಾರತದಲ್ಲಿನ ಅವರ ಕುಟುಂಬದ ಪ್ರಕಾರ, ನಿವೃತ್ತ ಶಾಲಾ ಶಿಕ್ಷಕರ ಮಗನಾದ ಚರಣ್, 4 ವರ್ಷಗಳ ಹಿಂದೆ ತನ್ನ ಸ್ನಾತಕೋತ್ತರ ಪದವಿಗಾಗಿ ಯುನೈಟೆಡ್ ಸ್ಟೇಟ್‌ಗೆ ತೆರಳಿದ್ದರು. ನಂತರ ಬಾಲ್ಟಿಮೋರ್ ಸಂಸ್ಥೆಯಲ್ಲಿ ಉದ್ಯೋಗವನ್ನು ಪಡೆದರು. ಅವರ ಸಹೋದರಿ ಕೂಡ ಅಮೆರಿಕದಲ್ಲಿ ಓದುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

- Advertisement -
spot_img

Latest News

error: Content is protected !!