Saturday, July 5, 2025
Homeಕರಾವಳಿಬಂಟ್ವಾಳ : ವಿವಿಧ ಕಳ್ಳತನ ಪ್ರಕರಣದ ಆರೋಪಿಯ ಹೆಡೆಮುರಿ ಕಟ್ಟಿದ ಬಂಟ್ವಾಳ ನಗರ ಪೊಲೀಸರು

ಬಂಟ್ವಾಳ : ವಿವಿಧ ಕಳ್ಳತನ ಪ್ರಕರಣದ ಆರೋಪಿಯ ಹೆಡೆಮುರಿ ಕಟ್ಟಿದ ಬಂಟ್ವಾಳ ನಗರ ಪೊಲೀಸರು

spot_img
- Advertisement -
- Advertisement -

ಮಂಗಳೂರು : ಬಂಟ್ವಾಳ ನಗರ ಠಾಣಾ ವ್ಯಾಪ್ತಿ ಸೇರಿದಂತೆ ವಿವಿಧ ಕಡೆ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ದಿ.ಮನ್ಸೂರು ಅವರ ಮಗನಾದ ಆರೋಪಿ ಮೊಹಮ್ಮದ್ ಇರ್ಫಾನ್ (24) ಎಂಬಾತನನ್ನು  ಡಿಸೆಂಬರ್ 23 ರಂದು ಬಂಧಿಸಲಾಗಿದೆ.

ಆರೋಪಿ ಕಳ್ಳತನ ಮಾಡಿದ ವಿವರ: ದಿನಾಂಕ: 8-12-2022 ರಂದು ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗಾಣದಪಡ್ಪು ಎಂಬಲ್ಲಿರುವ ಗುರುಕೃಪಾ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ರಾಜಾರಾಮ್ ಎಂಬವರಿಗೆ ಸೇರಿದ     “ವಾಹಿನಿ” ಹೆಸರಿನ  ಹೋಲ್ ಸೇಲ್ ಅಂಗಡಿಯ ಶಟರಿನ ಬಾಗಿಲ ಬೀಗವನ್ನು ಮರಿದು ಒಳ ಪ್ರವೇಶಿಸಿ  ಅಂಗಡಿಯೊಳಗಿದ್ದ 20,000/- ರೂಪಾಯಿ ಮೌಲ್ಯದ Red me ಮತ್ತು  Oppo ಕಂಪನಿಯ ಎರಡು ಮೊಬೈಲ್ ಪೋನ್ ಗಳನ್ನು ಹಾಗೂ ನಗದು 10,000/- ಹಣವನ್ನು ಕಳ್ಳತನ ಮಾಡಿದ್ದಾನೆ. ಕಳವು ಮಾಡಿದ ಮೊಬೈಲ್ ಪೋನ್ ಗಳನ್ನು ಸ್ವಾಧೀನಪಡಿಕೊಂಡಿದ್ದಾರೆ.

ಇನ್ನು  2021ನೇ ನವೆಂಬರ್ ತಿಂಗಳಲ್ಲಿ ಬಿ ಮೂಡ ಗ್ರಾಮದ ಬಿ.ಸಿ.ರೋಡ್ ಶ್ರೀನಿವಾಸ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ವಕೀಲರಾದ ಸುದರ್ಶನ್ ರವರ ಕಛೇರಿಯಲ್ಲಿದ್ದ ರೂಪಾಯಿ 3,000/- ಕಳವು ಮಾಡಿದ್ದ. ಆರೋಪಿಯು 2022 ನೇ ಡಿಸೆಂಬರ್ 6 ರಂದು ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಗೋಳಿತೊಟ್ಟು ಎಂಬಲ್ಲಿರುವ ಮನೆಯ ಬಾಗಿಲನ್ನು ಬೀಗವನ್ನು ಮುರಿದು ನಗದು ಕಳ್ಳತನ ಮಾಡಿದ್ದ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಸದ್ಯ ಆರೋಪಿ ಮಂಗಳೂರು ಜೈಲಿಗಟ್ಟಲಾಗಿದೆ.

ಆರೋಪಿಯ ಪತ್ತೆ ಕಾರ್ಯಾಚರಣೆಯಲ್ಲಿ ಬಂಟ್ವಾಳ ನಗರ ಠಾಣಾ ಇನ್ಸ್ಪೆಕ್ಟರ್ ವಿವೇಕಾನಂದರವರ ನೇತೃತ್ವದ ತಂಡದಲ್ಲಿ ಸಬ್ ಇನ್ಸ್ಪೆಕ್ಟರ್ ಅವಿನಾಶ್, ಸಬ್ ಇನ್ಸ್ಪೆಕ್ಟರ್ ಕಲೈಮಾರ್ ಹಾಗೂ ಸಿಬ್ಬಂದಿಗಳಾದ ರಾಜೇಶ್, ಇರ್ಷಾದ್, ಗಣೇಶ್, ಪ್ರವೀಣ್ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!