Thursday, May 2, 2024
Homeಕೊಡಗುತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ; ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡ ಭಕ್ತರು

ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ; ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡ ಭಕ್ತರು

spot_img
- Advertisement -
- Advertisement -

ಮಡಿಕೇರಿ: ಕೊಡಗಿನ ಭಾಗಮಂಡಲದ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವಾಗಿದೆ. ನಿಗದಿತ ಸಮಯದಂತೆ ಇಂದು 7.21ಕ್ಕೆ ಬ್ರಹ್ಮ ಕುಂಡಿಕೆಯಿಂದ ಕಾವೇರಿ ಜಲಧಾರೆ ತೀರ್ಥೋದ್ಬವಗೊಂಡಿತು.

ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದಾಗಿ ತಲಕಾವೇರಿಯ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಭಾಗವಹಿಸೋದಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿರಲಿಲ್ಲ. ಇಂದು ನಡೆದಂತ ಕಾವೇರಿ ತೀರ್ಥೋದ್ಭವದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಿ, ಪವಿತ್ರ ತೀರ್ಥೋದ್ಭವದಲ್ಲಿ ಮಿಂದೆದ್ದರು.

ಅಂದಹಾಗೇ ತೀರ್ಥೋದ್ಭವ ಸಂದರ್ಭ ಭಕ್ತರು ಹಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಪೊಲೀಸರಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ತಲಕಾವೇರಿ ಪವಿತ್ರ ಕುಂಡಿಕೆ ಬಳಿಯ ಕಲ್ಯಾಣಿಗೆ ಭಕ್ತರಿಂದ ನೂಕು ನುಗ್ಗಲು ಉಂಟಾಗದಂತೆ ಬ್ಯಾರಿಕೇಡ್‌ ಹಾಕಲಾಗಿತ್ತು. ತೀರ್ಥೋದ್ಭವ ವೀಕ್ಷಿಸಲು ಎಲ್‌ಇಡಿ ಪರದೆಯ ವ್ಯವಸ್ಥೆ ಕೂಡಾ ಮಾಡಲಾಗಿತ್ತು.

ಇನ್ನೂ ತಲಕಾವೇರಿಯ ತೀರ್ಥೋದ್ಭವದ ಈ ತುಲಾ ಸಂಕ್ರಮಣದ ಕಾಲದಲ್ಲಿ ತಲಾವೇರಿಗೆ ಬಂದು ಭ್ರಹ್ಮಕುಂಡಿಕೆಯ ಬಳಿಯಿರುವ ಕಲ್ಯಾಣಿಯಲ್ಲಿ ಮಿಂದು ಕಾವೇರಿ ತೀರ್ಥ ಸ್ವೀಕಾರ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತೆ ಎಂಬುದು ಜನರ ನಂಬಿಕೆಯಿದೆ.

- Advertisement -
spot_img

Latest News

error: Content is protected !!