Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ;  ಶಿಕ್ಷಕನಿಗೆ ಬೈಕ್ ಗುದ್ದಿ ಗಂಭೀರ ಗಾಯ

ಬೆಳ್ತಂಗಡಿ;  ಶಿಕ್ಷಕನಿಗೆ ಬೈಕ್ ಗುದ್ದಿ ಗಂಭೀರ ಗಾಯ

- Advertisement -
- Advertisement -

ಬೆಳ್ತಂಗಡಿ;  ಶಿಕ್ಷಕನಿಗೆ ಬೈಕ್ ಗುದ್ದಿ ಗಂಭೀರ ಗಾಯಗಳಾಗಿರುವ ಘಟನೆ ಕೊಯ್ಯೂರು ಗ್ರಾಮದ ಅದೂರು ಪೆರಾಲು ಎಂಬಲ್ಲಿ ನಡೆದಿದೆ. ಕೊಯ್ಯೂರು ಗ್ರಾಮದ ಅದೂರು ಪೆರಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಮೇಶ್‌ ಗಾಯಗೊಂಡವರು.

ರಮೇಶ್ ಸಂಜೆ ಶಾಲೆ ಬಿಟ್ಟು ಮನೆಗೆ ತೆರಳುವ ವೇಳೆ ಸರಕಾರಿ ಪ್ರೌಢಾ ಶಾಲಾ ಸಮೀಪ ಹಿಂದಿನಿಂದ ವೇಗವಾಗಿ ಬೈಕ್‌ ಚಲಾಯಿಸಿಕೊಂಡು ಬಂದು ಸ್ಥಳೀಯ ಯುವಕ  ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ  ರಮೇಶ್‌ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ.  ಅವರನ್ನು ಕೂಡಲೇ ಸ್ಥಳೀಯರು ಅವರನ್ನು ಬೆಳ್ತಂಗಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಕೈಗೊಂಡಿದ್ದಾರೆ.

- Advertisement -

Latest News

error: Content is protected !!