Thursday, June 4, 2026
Homeತಾಜಾ ಸುದ್ದಿಎರಡನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕ

ಎರಡನೇ ತರಗತಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಶಿಕ್ಷಕ

- Advertisement -
- Advertisement -

ಮಂಡ್ಯ: ಎರಡನೇ ತರಗತಿ ಬಾಲಕಿ ಮೇಲೆ ಶಿಕ್ಷಕನೊಬ್ಬ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲ್ಲೂಕಿನ ಗಂಗನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಿಕ್ಷಕ ಚಂದ್ರಶೇಖರ್ ಎಂಬಾತ ಮಾರ್ಚ್ 31ರಂದು ಶಾಲೆಗೆ ಹೋಗಿ ಬಂದಿದ್ದ  2ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮರುದಿನ ಬಾಲಕಿ, ಇಂದು ಶಾಲೆಗೆ ಹೋಗೋದಿಲ್ಲ ಎಂಬುದಾಗಿ ಹಠ ಹಿಡಿದಿದ್ದಾಳೆ. ಯಾಕೆ ಎಂಬುದಾಗಿ ಪೋಷಕರು ವಿಚಾರಿಸಿದಾಗ ಶಾಲೆಯಲ್ಲಿ ಶಿಕ್ಷಕ ಚಂದ್ರಶೇಖರ್ ಲೈಂಗಿಕ ಕಿರುಕುಳ ನೀಡಿದ್ದನ್ನು ತಿಳಿಸಿದ್ದಾಳೆ.

ಈ ವಿಷಯವನ್ನು ಬಿಇಒ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. ಕೂಡಲೇ ವಿಷಯದ ಗಂಭೀರತೆಯನ್ನು ಅರಿತಂತ ಬಿಇಓ ಬಸವರಾಜ ಅವರು, ಶಿಕ್ಷಕ ಚಂದ್ರಶೇಖರ್ ನನ್ನು ಅಮಾನತುಗೊಳಿಸಿದ್ದಾರೆ. ಪೋಷಕರು ಕಿಕ್ಕೇರಿ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ, ಅವರನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ. ಅಂದಹಾಗೇ ಕಳೆದ 10 ವರ್ಷಗಳಿಂದ ಗಂಗೇನಹಳ್ಳಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಚಂದ್ರಶೇಖರ್ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!