Saturday, May 4, 2024
Homeತಾಜಾ ಸುದ್ದಿಏರ್ ಇಂಡಿಯಾ ಕಂಪನಿಯನ್ನು ಖರೀದಿಸಿದ ಟಾಟಾ ಗ್ರೂಪ್!

ಏರ್ ಇಂಡಿಯಾ ಕಂಪನಿಯನ್ನು ಖರೀದಿಸಿದ ಟಾಟಾ ಗ್ರೂಪ್!

spot_img
- Advertisement -
- Advertisement -

ಮುಂಬೈ: ಇಂದು ಭಾರತೀಯ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆಯ ಖರೀದಿ ಸಂಬಂಧ ಬಿಡ್ ನಡೆಸಲಾಗಿದ್ದು, ಅಂತಿಮವಾಗಿ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಸನ್ಸ್ ಖರೀದಿಸೋದ್ರಲ್ಲಿ ಸಫಲವಾಗಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ.

ಈ ಬಿಡ್ ನಲ್ಲಿ ವಿವಿಧ ಸಂಸ್ಥೆಗಳು ಪಾಲ್ಗೊಂಡಿದ್ದವು. ಏರ್ ಇಂಡಿಯಾ ಈ ಹಿಂದೆ ಟಾಟಾ ಗ್ರೂಪ್ ಕಂಪನಿಯಾಗಿತ್ತು. ಈ ಕಂಪನಿಯನ್ನು ಜೆಆರ್ ಡಿ ಟಾಟಾ 1932 ರಲ್ಲಿ ಸ್ಥಾಪಿಸಿದ್ದರು. ಸ್ವಾತಂತ್ರ್ಯ ನಂತರ, ವಾಯುಯಾನ ವಲಯವನ್ನು ರಾಷ್ಟ್ರೀಕರಣಗೊಳಿಸಲಾಯಿತು ಮತ್ತು ಸರ್ಕಾರವು ಟಾಟಾ ಏರ್ ಲೈನ್ಸ್ ಷೇರುಗಳಲ್ಲಿ ಶೇಕಡಾ 49 ರಷ್ಟನ್ನು ಖರೀದಿಸಿತು.


ನಂತರ ಕಂಪನಿಯು ಸಾರ್ವಜನಿಕ ಸೀಮಿತ ಕಂಪನಿಯಾಗಿ ಪರಿವರ್ತಿತವಾಯಿತು ಮತ್ತು ಜುಲೈ 29, 1946 ರಂದು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. 1953 ರಲ್ಲಿ, ಸರ್ಕಾರವು ಏರ್ ಕಾರ್ಪೊರೇಷನ್ ಕಾಯ್ದೆಯನ್ನು ಅಂಗೀಕರಿಸಿ, ಕಂಪನಿಯ ಸ್ಥಾಪಕ ಜೆಆರ್ ಡಿ ಟಾಟಾ ಅವರಿಂದ ಮಾಲೀಕತ್ವದ ಹಕ್ಕುಗಳನ್ನು ಖರೀದಿಸಿತು. ನಂತರ ಈ ಕಂಪನಿಯನ್ನು ಏರ್ ಇಂಡಿಯಾ ಇಂಟರ್ ನ್ಯಾಷನಲ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಯಿತು.ಹೀಗಾಗಿ ಟಾಟಾ ಗ್ರೂಪ್ 68 ವರ್ಷಗಳ ನಂತರ ಮತ್ತೊಮ್ಮೆ ತನ್ನ ಸ್ವಂತ ಕಂಪನಿಯನ್ನು ಹಿಂತೆಗೆದುಕೊಂಡಿದೆ.

- Advertisement -
spot_img

Latest News

error: Content is protected !!