Thursday, June 25, 2026
Homeಕರಾವಳಿಸುಳ್ಯ; ಪಾಣತ್ತೂರು ಬಳಿ ಮನೆ ಮೇಲೆ ಬಿದ್ದ ಡಿಸೇಲ್ ತುಂಬಿದ ಟ್ಯಾಂಕರ್: ಇಬ್ಬರಿಗೆ ಗಂಭೀರ ಗಾಯ

ಸುಳ್ಯ; ಪಾಣತ್ತೂರು ಬಳಿ ಮನೆ ಮೇಲೆ ಬಿದ್ದ ಡಿಸೇಲ್ ತುಂಬಿದ ಟ್ಯಾಂಕರ್: ಇಬ್ಬರಿಗೆ ಗಂಭೀರ ಗಾಯ

- Advertisement -
- Advertisement -

ಸುಳ್ಯ; ಡಿಸೇಲ್ ತುಂಬಿದ ಟ್ಯಾಂಕರ್ ಒಂದು ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಪಾಣತ್ತೂರು ಬಳಿ ನಡೆದಿದೆ.

ಮಂಗಳೂರಿಂದ ಡಿಸೇಲ್ ತುಂಬಿಕೊಂಡು ಕರಿಕೆ ಕಡೆ ತೆರಳುತ್ತಿದ್ದ  ಟ್ಯಾಂಕರ್ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಮನೆ ಮೇಲೆ ಬಿದ್ದಿದೆ. ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಂಭೀರ ಗಾಯಗೊಂಡಿರುವ ಟ್ಯಾಂಕರ್ ಚಾಲಕ ಮತ್ತು ಮತ್ತೋರ್ವನನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ಯಾಂಕರ್ ಹಲವು ಪಲ್ಟಿ ಹೊಡೆದಿದ್ದು ಅಪಘಾತದಲ್ಲಿ ಟ್ಯಾಂಕರ್ ನಜ್ಜುಗುಜ್ಜಾಗಿದ್ದು , ತುಂಬಿರುವ ಡೀಸೆಲ್ ಅಲ್ಪ ಪ್ರಮಾಣದಲ್ಲಿ ಸೋರಿಕೆಯಾಗುತ್ತಿರುವುದಾಗಿ ತಿಳಿದು ಬಂದಿದೆ.ಕಳೆದ ವರ್ಷ ಇದೇ ಪ್ರದೇಶದಲ್ಲಿ ಸುಳ್ಯದಿಂದ ತೆರಳುತ್ತಿದ್ದ ಕೇರಳ ಬಸ್ ಪಲ್ಟಿಯಾಗಿ 7 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು

- Advertisement -

Latest News

error: Content is protected !!