- Advertisement -
- Advertisement -
ಚೆನ್ನೈ: ಡಬ್ಬಿಂಗ್ ಮಾಡುವಾಗಲೇ ಹೃದಯಾಘಾತವಾಗಿ ಕುಸಿದು ಬಿದ್ದು ತಮಿಳಿನ ಖ್ಯಾತ ನಟ , ನಿರ್ದೇಶಕ ಜಿ. ಮಾರಿಮುತ್ತು (58) ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 8-30ಕ್ಕೆ ಅವರು ತಮ್ಮ ಸಹೋದ್ಯೋಗಿ ಕಮಲೇಶ್ ಅವರೊಂದಿಗೆ ತಮ್ಮ ಟಿವಿ ಶೋ ‘ಎಥಿರ್ ನೀಚಲ್’ ಗೆ ಡಬ್ಬಿಂಗ್ ಮಾಡುತ್ತಿದ್ದರು. ಚೆನ್ನೈನ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡುವಾಗ ಕುಸಿದು ಬಿದ್ದಿದ್ದಾರೆ. ಅವರನ್ನು ಚೆನ್ನೈನ ವಡಪಳನಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ
ಮಾರಿಮುತ್ತು ಅವರು ರಜನಿಕಾಂತ್ ಅಭಿನಯದ ‘ಜೈಲರ್’ ಮತ್ತು ‘ರೆಡ್ ಸ್ಯಾಂಡಲ್ ವುಡ್’ ನಲ್ಲಿ ಕೊನೆಯದಾಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದಾರೆ.ಅವರ ಹಠಾತ್ ಸಾವು ಎಲ್ಲರಿಗೂ ದೊಡ್ಡ ಆಘಾತವನ್ನುಂಟು ಮಾಡಿದೆ. ಅವರು ಪತ್ನಿ ಬ್ಯಾಕಿಯಲಕ್ಷ್ಮಿ ಹಾಗೂ ಇಬ್ಬರು ಮಕ್ಕಳಾದ ಅಕಿಲನ್ ಮತ್ತು ಐಶ್ವರ್ಯ ಅವರನ್ನು ಅಗಲಿದ್ದಾರೆ.
- Advertisement -