ಬೆಳ್ತಂಗಡಿ : “ಮೂಲ ಸೌಕರ್ಯಗಳಿಂದ ವಂಚಿತರಾದ ವೃದ್ಧೆ, ಏಕಾಂಗಿಯಾಗಿ ಬದುಕು ಸಾಗಿಸುತ್ತಿರುವ ಡೀಕಮ್ಮ ಅಜ್ಜಿ” ಎಂಬ ಶೀರ್ಷಿಕೆ ಅಡಿಯಲ್ಲಿ ನಿಮ್ಮ ಮಹಾಎಕ್ಸ್ ಪ್ರೆಸ್ ನಲ್ಲಿ ಜೂ.26 ರಂದು ಬೆಳಗ್ಗೆ ವರದಿ ಭಿತ್ತರವಾದ ಬೆನ್ನಲ್ಲೇ ಕಂದಾಯ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಪಂದನೆ ನೀಡಿ ಮೂಲಭೂತ ಸೌಕರ್ಯಗಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗೆ ಮುಂದಾಗಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅವರ ಸೂಚನೆ ಮೇರೆಗೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಅಧಿಕಾರಿಗಳು ಜೂನ್ 27 ರಂದು ಸಂಜೆ ಡೀಕಮ್ಮ ಅಜ್ಜಿ ಮನೆಗೆ ಭೇಟಿ ನೀಡಿ ವಾಸ್ತವ್ಯ ದೃಢೀಕರಣ ಪತ್ರ ಹಾಗೂ ಆಹಾರ ಸಾಮಗ್ರಿಗಳ ಕಿಟ್ ನೀಡಿದರು. ಡೀಕಮ್ಮ ಅಜ್ಜಿಗೆ ವೋಟರ್ ಐಡಿ ಅರ್ಜಿ ಭರ್ತಿ ಮಾಡಿ ಚುನಾವಣಾ ಆಯೋಗದ ಸೈಟ್ ಗೆ ಅಪ್ ಲೋಡ್ ಮಾಡಲಾಗಿದೆ.ಇನ್ನು ಅಧಿಕಾರಿಗಳು.ಆಧಾರ್ ಮತ್ತು ಪಡಿತರ ಚೀಟಿ ಕೂಡ ಮಾಡಿ ಕೊಡಲಿದ್ದಾರೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಜೊತೆಯಲ್ಲಿ ಅಳದಂಗಡಿ ಗ್ರಾಮ ಆಡಳಿತಾಧಿಕಾರಿ ವಿಜೇತ್.ಬಿ, ವೇಣೂರು ಆರ್.ಐ.ಕುಮಾರ್ ಸ್ವಾಮಿ, ಗ್ರಾಮ ಸಹಾಯಕಿ ಶಾರದಾ ,ಚಾಲಕ ಸಂತೋಷ್, ಸ್ಥಳೀಯ ನಿವಾಸಿ ಸಂತೋಷ್ ಜೊತೆಯಿದ್ದರು.
