Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಬಾವಿಗೆ ಹಾರಿ ಆತ್ಮಹತ್ಯೆ ಶರಣಾದ ಶಿಕ್ಷಕಿ

ಬೆಳ್ತಂಗಡಿ : ಬಾವಿಗೆ ಹಾರಿ ಆತ್ಮಹತ್ಯೆ ಶರಣಾದ ಶಿಕ್ಷಕಿ

- Advertisement -
- Advertisement -

ಬೆಳ್ತಂಗಡಿ : ಬಾವಿಗೆ ಹಾರಿ ಆತ್ಮಹತ್ಯೆ ಶಿಕ್ಷಕಿ ಆತ್ಮಹತ್ಯೆಗೆ ಶರಣಾದ ಘಟನೆ ಅರಸಿನಮಕ್ಕಿ ಗ್ರಾಮದ ಬೂಡುಮುಗೇರು ಎಂಬಲ್ಲಿ ನಡೆದಿದೆ.

ಅರಸಿನಮಕ್ಕಿ ಗ್ರಾಮದ ಬೂಡುಮುಗೇರು ನಿವಾಸಿ ಅರಸಿನಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದ ತೇಜಸ್ವಿನಿ (23) ಆತ್ಮಹತ್ಯೆಗೆ ಶರಣಾದವರು. ಅವರು ಅ.23 ರಂದು ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದ್ದು. ಈ ಬಗ್ಗೆ ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ‌ದ್ದು. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.23 ರಂದು ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!