Monday, April 29, 2024
Homeತಾಜಾ ಸುದ್ದಿ'ಸುಶಾಂತ್​ ಸಿಂಗ್​ ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರ್ತಾನೆ'

'ಸುಶಾಂತ್​ ಸಿಂಗ್​ ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರ್ತಾನೆ'

spot_img
- Advertisement -
- Advertisement -

ನಟಿ ರಾಖಿ ಸಾವಂತ್ ಡ್ರಾಮಾ ಮಾಡೋದರಲ್ಲಿ ಎತ್ತಿದ ಕೈ. ಅಸಂಬದ್ಧ ಹೇಳಿಕೆಗಳನ್ನು ನೀಡಿ, ಹಲವು ಬಾರಿ ಇವರು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ಟ್ರೋಲ್ ಆಗಿದ್ದಾರೆ. ಹೀಗಾಗಿಯೇ ರಾಖಿಯೆಂದರೆ ಈಗ ಹಲವರಿಗೆ ಅಸಡ್ಡೆ, ಅಸಮಾಧಾನ. ಸಮಾಜದಲ್ಲಿ ಏನೇ ವಿಚಾರ ಚರ್ಚೆಯಲ್ಲಿರಲಿ, ರಾಖಿ ಅದರ ಬಗ್ಗೆ ಇಲ್ಲಸಲ್ಲದ ನಾಟಕ ಮಾಡುತ್ತ ಬಂದು ಮಾತನಾಡುತ್ತಾರೆ. ಹಿಂದಿ, ಕನ್ನಡ, ತೆಲುಗು, ತಮಿಳು, ಓಡಿಯಾ, ಮರಾಠಿ ಮುಂತಾದ ಭಾಷೆಗಳ ಸಿನಿಮಾಗಳಲ್ಲಿ ರಾಖಿ ಕಾಣಿಸಿಕೊಂಡಿದ್ದು, ಕಾಂಟ್ರವರ್ಸಿ ನಟಿ ಎಂದು ಕರೆಯಬಹುದು.

ರಾಖಿ ಸಾವಂತ್​​ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವನ್ನಪ್ಪಿದ ನಟ ಸುಶಾಂತ್​ ಸಿಂಗ್ ರಜಪೂತ್​ ಬಗ್ಗೆ ಮಾತನಾಡಿರುವ ವಿಡಿಯೋವನ್ನು ಇನ್​​​​ಸ್ಟಾಗ್ರಾಂನಲ್ಲಿ ಅಪ್ಲೋಡ್​ ಮಾಡಿದ್ದಾರೆ. ವಿಡಿಯೋದಲ್ಲಿ ರಾಖಿ ಸಾವಂತ್​, ಸುಶಾಂತ್​ ಸಿಂಗ್​ ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರುತ್ತಾನೆ ಎಂದಿದ್ದಾರೆ.

ರಾಖಿ ಸಾವಂತ್​ ಕನಸಿನಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಬಂದಿದ್ದರಂತೆ. ಈ ವಿಚಾರವನ್ನು ವಿಡಿಯೋದಲ್ಲಿ ಹೇಳುವ ಮೂಲಕ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಸ್ನೇಹಿತರೆ ನಾನು ನಿಮಗೊಂದು ಗುಡ್​ನ್ಯೂಸ್​​ ಹೇಳುತ್ತೇನೆ, ನಾನು ನಿನ್ನೆ ರಾತ್ರಿ ಮಲಗಿದ್ದಾಗ ಕನಸು ಬಿತ್ತು. ತಕ್ಷಣ ಎಚ್ಚರ ಆಯ್ತು. ನನ್ನ ಕನಸಿನಲ್ಲಿ ಸುಶಾಂತ್ ಸಿಂಗ್​ ಬಂದಿದ್ದರು. ನೀವು ನಾನು ಹೇಳುತ್ತಿರುವ ಈ ಮಾತನ್ನು ನಂಬೋದಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ.

ನಾನು ಈ ಕನಸಿನಿಂದ ಬೆವತುಬಿಟ್ಟೆ. ಸುಶಾಂತ್​ ಸಿಂಗ್​ ನೀನು ಮದುವೆಯಾದರೆ ನಿನ್ನ ಹೊಟ್ಟೆಯಲ್ಲಿ ನಾನು ಮತ್ತೆ ಹುಟ್ಟಿ ಬರುತ್ತೇನೆ. ನನ್ನ ಅಭಿಮಾನಿಗಳಿಗೆ ಈ ವಿಷಯ ತಿಳಿಸು. ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗು ಸುಶಾಂತ್ ಆಗಿರುತ್ತಾನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ

ನನಗೆ ಸುಶಾಂತ್ ಸಿಂಗ್​ ಒಳ್ಳೆಯ ಸ್ನೇಹಿತ, ಸಹೋದರ ಆಗಿದ್ದಾನೆ. ಈ ಚಿತ್ರರಂಗ ನನಗೆ ತುಂಬ ಕಷ್ಟ ಕೊಟ್ಟಿದೆ. ಬಾಲಿವುಡ್ ನನಗೆ‌ ಎಷ್ಟು ಕೊಟ್ಟಿದೆಯೋ ಅಷ್ಟೇ ಕಿತ್ತುಕೊಂಡಿದೆ. ಪಾರ್ಟಿಗಳಿಗೆ ಬಾಯ್‌ಕಟ್ ಹೇಳಿತ್ತು. ಕಂಗನಾ ರಣಾವತ್, ರಾಖಿ ಸಾವಂತ್ ನನಗೆ ಪ್ರೋತ್ಸಾಹ ನೀಡಿದ್ದಾರೆ. ಇವರಿಗೆ ನನ್ನ ಧನ್ಯವಾದಗಳು ಎಂದು ನನ್ನ ಬಳಿ ಹೇಳಿದ್ದಾರೆ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ನನಗೆ ಯಾವಾಗಲೂ ತುಂಬ ಮೋಸ ಆಗುತ್ತಿತ್ತು. ಕರಣ್ ಜೋಹರ್ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇತ್ತು, ಸಲ್ಮಾನ್ ಖಾನ್ ಸಿನಿಮಾದಲ್ಲಿ ಅಭಿನಯಿಸುವ ಕನಸಿತ್ತು. ನನ್ನ ಮೇಲೆ ಸಿಕ್ಕಾಪಟ್ಟೆ ಆರೋಪ ಮಾಡಿದ್ದಾರೆ. ನನ್ನ ಮಾನಸಿಕ ಸಮತೋಲನ ಸರಿ ಇಲ್ಲ ಎಂದು ಆರೋಪ ಮಾಡಿದ್ದಾರೆ. ನನ್ನ ಮೇಲೆ ಆರೋಪ ಮಾಡಿದವರನ್ನು ನಾನು ನೋಡಿಕೊಳ್ಳುತ್ತೇನೆ. ನನ್ನ ದೇಹ ಇಲ್ಲ, ಆದರೆ ಆತ್ಮವಿದೆ. ಈ ಮೂಲಕ ನಾನು ಸೇಡು ತೀರಿಸಿಕೊಳ್ಳುತ್ತೇನೆ. ನಾನು ನಟಿಸಬೇಕಾದ ಹಲವು ಸಿನಿಮಾಗಳಿವೆ. ಅವುಗಳಲ್ಲಿ ರಾಖಿ ಸಾವಂತ್ ಐಟಂ ಡಾನ್ಸ್, ಸನ್ನಿ ಲಿಯೋನ್ ಡಾನ್ಸ್ ಕೂಡ ಹಾಕಿಕೊಳ್ಳಿ ಎಂದು ಸುಶಾಂತ್ ಕನಸಿನಲ್ಲಿ ಹೇಳಿದ್ದಾರೆ’ ಎಂದು ರಾಖಿ ಹೇಳಿದ್ದಾರೆ.

ರಾಖಿ ಸಾವಂತ್ ಅವರ ಈ ವಿಡಿಯೋಕ್ಕೆ ನೆಟ್ಟಿಗರು ಕೆಂಡ ಕಾರುತ್ತಿದ್ದಾರೆ. ರಾಖಿ ಅವರಿಗೆ ತರಹೇವಾರಿ ಕಾಮೆಂಟ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಖಿ ಸೋಶಿಯಲ್ ಮೀಡಿಯಾ ಖಾತೆಯನ್ನು ರಿಪೋರ್ಟ್ ಮಾಡಿ ನಿಷೇಧ ಮಾಡುವಂತೆ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ರಾಖಿ ಈ ರೀತಿ ಮಾಡುತ್ತಿರುವುದು ಇದು ಮೊದಲೇನಲ್ಲ ಎಂಬುದನ್ನು ನೆನಪಿಡಬೇಕು.

- Advertisement -
spot_img

Latest News

error: Content is protected !!