Thursday, June 25, 2026
HomeಕರಾವಳಿBig Breaking: ಸುರೇಂದ್ರ ಬಂಟ್ವಾಳ ಕೊಲೆ ಹಿಂದೆ ಭೂಗತ ಲೋಕದ ನಂಟು?

Big Breaking: ಸುರೇಂದ್ರ ಬಂಟ್ವಾಳ ಕೊಲೆ ಹಿಂದೆ ಭೂಗತ ಲೋಕದ ನಂಟು?

- Advertisement -
- Advertisement -

ಬಂಟ್ವಾಳ : ತುಳು ಚಲನಚಿತ್ರ‌ ನಟ& ರೌಡಿ ಶೀಟರ್ ಸುರೇಂದ್ರ ಬಂಟ್ವಾಳನನ್ನು ತನ್ನ ಬಿ.ಸಿ.ರೋಡಿನ ಪ್ಲ್ಯಾಟ್ ನಲ್ಲಿ ಮಂಗಳವಾರ ಸಂಜೆ ಮರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದು ಘಟನೆ ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.‌ ಈ ಬಗ್ಗೆ ಸಿಸಿಕ್ಯಾಮರದಲ್ಲಿ ಇಬ್ಬರು ಹೆಲ್ಮೆಟ್ ಹಾಕಿಕೊಂಡು ಪ್ಲ್ಯಾಟ್ ಗೆ ಬಂದು ಹೋಗುವ ದೃಶ್ಯ ‌ಸೆರೆಸಿಕ್ಕಿದೆ. ಕೊಲೆಯನ್ನು ಸುರೇಂದ್ರ ಬಂಟ್ವಾಳ ಅಪ್ತ ಸತೀಶ್ ಕುಲಾಲ್ ಮಾಡಿರುವುದಾಗಿ ಅನುಮಾನ ಕಾಣುತ್ತಿದೆ ಇನ್ನೊಂದೆಡೆ ಸತೀಶ್ ನ ಮೊಬೈಲ್ ಸ್ವೀಚ್ ಆಫ್ ಅಗಿದೆ.

ಭೂಗತ ಲೋಕದ‌‌ ನಂಟು

ಈ ಕೊಲೆ ಭೂಗತ ಲೋಕದ ಪಾತಕಿ ವಿಕ್ಕಿ ಶೆಟ್ಟಿ ಮಾಡಿಸಿದ್ದಾನೆ ಎಂದು ಮೂಲಗಳಿಂದ ಮಾಹಿತಿ‌ ಸಿಕ್ಕಿದೆ. ಸುರೇಂದ್ರ ಬಂಟ್ವಾಳ ಮಂಗಳೂರಿನ ಕೋಡಿಕೆರೆ ಮನೋಜ್ ಗ್ಯಾಂಗಿಗೆ ಫೈನಾನ್ಸ್ ಮಾಡುತ್ತಿದ್ದ.ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆ ಮಾಡಿದ ಬಳಿಕ ಮನೋಜ್ ಕೋಡಿಕೆರೆ ಜೈಲಿನಲ್ಲಿರುವಾಗ ಇದೆ ಸುರೇಂದ್ರ ಬಂಟ್ವಾಳ ಒಂದೂವರೆ ಲಕ್ಷ ಹಣ ,ಬಟ್ಟೆ ನೀಡಿ ಸಹಾಯ ಮಾಡಿದ್ದ. ಕೊಲೆಗೂ ಫೈನಾಸ್ಸ್ ಮಾಡಿದ್ದ ಎನ್ನಲಾಗಿದೆ.ಇದೆ ಕಾರಣಕ್ಕೆ ಡಾನ್ ವಿಕ್ಕಿ ಶೆಟ್ಟಿ ತನ್ನ ಸಹಚರರ ಮೂಲಕ ಸುರೇಂದ್ರ ಬಂಟ್ವಾಳನನ್ನು ಕೊಲೆ ಮಾಡಿಸಿದ್ದಾನೆ‌ ಎನ್ನಲಾಗಿದೆ. ಆದ್ರೆ ಪ್ರತಿ‌ ಭಾರಿ ಕೊಲೆ ಮಾಡಿದ ತಕ್ಷಣ ವಿಕ್ಕಿ ಶೆಟ್ಟಿ ಮಾಧ್ಯಮಗಳಿಗೆ ಕರೆ ಮಾಡಿ ತಾನೇ ಮಾಡಿಸಿದ್ದೇನೆ ಎಂದು ಹೇಳುತ್ತಾನೆ ಈ ಪ್ರಕರಣದಲ್ಲಿ ಈವರೆಗೆ ಎಲ್ಲೂ ಯಾವುದೇ ಹೇಳಿಕೆ ವಿಕ್ಕಿ ಶೆಟ್ಟಿ ಕರೆ ಮಾಡಿ ತಿಳಿಸಿಲ್ಲ.

ಸುರೇಂದ್ರ ಬಂಟ್ವಾಳ ಕೊಲೆ‌ ಪ್ರಕರಣವನ್ನು ತನಿಖೆ ಮಾಡಲು ಮೂರು ವಿಶೇಷ ತಂಡ ರಚಿಸಲಾಗಿದ್ದು ಶೀಘ್ರದಲ್ಲಿ ಆರೋಪಿಗಳ ಬಂಧಿಸಲಾಗುವುದು ಎಂದು ಎಸ್ಪಿ ಲಕ್ಷ್ಮೀ ಪ್ರಸಾದ್ ಮಾಧ್ಯಮಗಳಿಗೆ ಹೇಳಿದ್ದಾರೆ.

ವಾರದ ಹಿಂದೆ ಬೆಂಗಳೂರಲ್ಲಿ ಮನೋಜ್ ಕೋಡಿಕೆರೆಯ ಅಪ್ತ ಮನೀಶ್ ಶೆಟ್ಟಿಯನ್ನು ಭೂಗತ ಪಾತಕಿ ವಿಕ್ಕಿ ಶೆಟ್ಟಿ ಕೊಲೆ ಮಾಡಿಸಿದ್ದ ಇದರ ನಾಲ್ಕು ಜನ ಆರೋಪಿಗಳನ್ನು ಬಂಧಿಸಿಲಾಗಿದೆ.‌

ಸುರೇಂದ್ರ ಬಂಟ್ವಾಳ್ ಕೊಲೆ ಬಳಿಕ ವೈರಲ್‌ ಆಗುತ್ತಿರುವ ವಾಟ್ಸಾಪ್ ಫೋಸ್ಟ್ ??

- Advertisement -

Latest News

error: Content is protected !!