Wednesday, June 24, 2026
Homeತಾಜಾ ಸುದ್ದಿಸೊಸೆಯೊಂದಿಗಿನ ಬೆಡ್ ರೂಮ್ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿದ ಮಾವ !

ಸೊಸೆಯೊಂದಿಗಿನ ಬೆಡ್ ರೂಮ್ ವಿಡಿಯೋವನ್ನು ಎಲ್ಲರಿಗೂ ಶೇರ್ ಮಾಡಿದ ಮಾವ !

- Advertisement -
- Advertisement -

ಸೂರತ್: ಸೊಸೆಯೊಂದಿಗೆ ಸಂಬಂಧ ಬೆಳೆಸಿ, ಆಕೆಯೊಂದಿಗೆ ಬೆಡ್ ರೂಮ್ ನಲ್ಲಿ ಕಳೆದ ವಿಡಿಯೋವನ್ನು ಆಕೆಯ ತಂದೆಗೆ ಕಳುಹಿಸಿ ಬೆದರಿಕೆ ಒಡ್ಡಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.

ಸೌರಾಷ್ಟ್ರ ಮೂಲದ ಯುವತಿ ಸೂರತ್ ಪುನಾ ಪ್ರದೇಶದಲ್ಲಿ ವಾಸವಾಗಿದ್ದು, ಸೀರೆಗಳಿಗೆ ಫಾಲ್ಸ್ ಲೇಸ್ ವರ್ಕ್ ಮಾಡುವ ಕೆಲಸ ಮಾಡಿಕೊಂಡಿದ್ದಾಳೆ. ಈ ಕೆಲಸವನ್ನು ಆಕೆಯ 30 ವರ್ಷದ ಅಂಕಲ್ ಕಲಿಸಿ ಕೊಟ್ಟಿದ್ದಾನೆ. ಆಗಾಗ ಮನೆಗೆ ಬಂದು ಹೋಗುತ್ತಿದ್ದ ಆರೋಪಿ, ಯುವತಿಯೊಂದಿಗೆ ಸಂಬಂಧ ಬೆಳೆಸಿದ್ದು ಖಾಸಗಿ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ.

ಈ ನಡುವೆ ಮನೆಯಲ್ಲಿ ಯುವತಿಗೆ ಮದುವೆ ಮಾಡಲು ಮುಂದಾಗುತ್ತಿದ್ದಂತೆ ಮದುವೆ ನಂತರವೂ ಸಂಬಂಧ ಮುಂದುವರಿಸಲು ಬಲವಂತ ಮಾಡಿದ್ದಾನೆ. ಇದಕ್ಕೆ ನಿರಾಕರಿಸಿದಾಗ ವಿಡಿಯೋವನ್ನು ಯುವತಿಯ ತಂದೆಗೆ ಮತ್ತು ಸಮುದಾಯದ ಕೆಲವು ಜನರೊಂದಿಗೆ ಹಂಚಿಕೊಂಡಿದ್ದಾನೆ.

ಪುನಾ ಏರಿಯಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.

(ಸುದ್ದಿಯ ಮೂಲ- ಅಹಮದಾಬಾದ್ ಮಿರರ್)

- Advertisement -

Latest News

error: Content is protected !!