Saturday, May 18, 2024
Homeಕರಾವಳಿಬೆಳ್ತಂಗಡಿ : ಖಡಕ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಎಂಟ್ರಿಯಿಂದ ಬೆಚ್ಚಿಬಿದ್ದ ದುಷ್ಟರು:ಅಕ್ರಮಗಳನ್ನು ಬಂದ್ ಮಾಡಲು ಖಡಕ್ ವಾರ್ನಿಂಗ್...

ಬೆಳ್ತಂಗಡಿ : ಖಡಕ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಎಂಟ್ರಿಯಿಂದ ಬೆಚ್ಚಿಬಿದ್ದ ದುಷ್ಟರು:ಅಕ್ರಮಗಳನ್ನು ಬಂದ್ ಮಾಡಲು ಖಡಕ್ ವಾರ್ನಿಂಗ್ ಕೊಟ್ಟ ಸೂಪರ್ ಕಾಪ್

spot_img
- Advertisement -
- Advertisement -

ಬೆಳ್ತಂಗಡಿ : ಬೆಳ್ತಂಗಡಿ ಪೊಲೀಸ್ ಠಾಣೆ ಮೇಲ್ದರ್ಜೆಗೇರಿಸಿದ ಬಳಿಕ ಹೊಸದಾಗಿ ಇನ್ಸ್ಪೆಕ್ಟರ್ ಆಗಿ ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು ಸರ್ಕಲ್ ಇನ್ಸ್ಪೆಕ್ಟರ್ ಆಗಿದ್ದ ರಾಷ್ಟ್ರಪತಿ ಪದಕು ಹಾಗೂ ಮುಖ್ಯಮಂತ್ರಿ ಪದಕ ಪಡೆದ ಖಡಕ್ ಪೊಲೀಸ್ ಅಧಿಕಾರಿ ಎಂದೇ ಖ್ಯಾತಿ ಪಡೆದ ಸತ್ಯನಾರಾಯಣ.ಕೆ  ಫೆ.5 ರಂದು ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಬೆಳ್ತಂಗಡಿಯಲ್ಲಿ ನಡೆದ ಅಪರಾಧ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದು ಅದಲ್ಲದೇ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಅದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ನಿಗಾ ವಹಿಸುತ್ತಿರುವಾಗಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾಹಿತಿ ಮೇರೆಗೆ ಬಂಟ್ವಾಳ ಡಿವೈಎಸ್ಪಿ ವಿಶೇಷ ತಂಡ ಫೆ.6 ರಂದು ರಾತ್ರಿ ಉಜಿರೆ ಲಾಡ್ಜ್ ಗಳ ಮೇಲೆ ದಾಳಿ ಮಾಡಿದ್ದರು ಆದ್ರೆ ಏನೂ ಕೂಡ ಅಕ್ರಮ ನಡೆಯುತ್ತಿದ್ದ ಬಗ್ಗೆ ಕಂಡುಬಂದಿರಲ್ಲಿಲ್ಲ.

ಇದೀಗ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಲಾಡ್ಜ್ ಗಳ ಎಲ್ಲಾ ಮಾಲೀಕರನ್ನು ಫೆ.7 ರಂದು ಬೆಳಗ್ಗೆ11 ಗಂಟೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದು ಸಭೆ ನಡೆಸಿದ್ದಾರೆ.ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆಗಳಂತಹ ವ್ಯವಹಾರಗಳನ್ನು ನಡೆಸಬಾರದು ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು. ಲಾಡ್ಜ್ ಗಳಲ್ಲಿ ಅಕ್ರಮವಾಗಿ ಜುಗಾರಿ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು ಯಾವುದೇ  ಅಕ್ರಮಗಳ ನಡೆಯುವ ಬಗ್ಗೆ ಸಣ್ಣ ಮಾಹಿತಿ ಬಂದರೂ ಕಾನೂನು ಕ್ರಮ ಕೈಗೊಂಡು ಅಂತಹವರನ್ನು ಜೈಲಿಗಟ್ಟಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ‌. ಮುಂದೆ ವಿಧಾನಸಭೆ ಚುನಾವಣೆ ಇರುವುದರಿಂದ ಲಾಡ್ಜ್ ಗಳಲ್ಲಿ ತಂಗುವವರ ಸರಿಯಾದ ವಿವರ ಹಾಗೂ ಆಧಾರ್ ಕಾರ್ಡ್ ಪಡೆದುಕೊಂಡು ರೂಂ ನೀಡಬೇಕು. ಅನುಮಾನಸ್ವದ ವ್ಯಕ್ತಿಗಳು ಲಾಡ್ಜ್ ಗಳಿಗೆ ಬಂದಲ್ಲಿ ತಕ್ಷಣ ಪೊಲೀಸರನ್ನು  ಸಂಪರ್ಕಿಸಿ ಮಾಹಿತಿ ನೀಡಿ ಸಹಕರಿಸಬೇಕೆಂದು ಸಭೆಯಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ , ಸಬ್ ಇನ್ಸ್ಪೆಕ್ಟರ್ ಅರ್ಜುನ್ ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!