Thursday, June 4, 2026
Homeತಾಜಾ ಸುದ್ದಿಮಂಡ್ಯದಲ್ಲಿ ಸನ್ನಿ ಲಿಯೋನ್ ಹುಟ್ಟು ಹಬ್ಬಕ್ಕೆ ಬಾಡೂಟ

ಮಂಡ್ಯದಲ್ಲಿ ಸನ್ನಿ ಲಿಯೋನ್ ಹುಟ್ಟು ಹಬ್ಬಕ್ಕೆ ಬಾಡೂಟ

- Advertisement -
- Advertisement -

ಮಂಡ್ಯ: ನೀಲಿ ಚಿತ್ರಗಳ‌ ತಾರೆಯಾಗಿ ಗುರುತಿಸಿಕೊಂಡಿದ್ದ ಸನ್ನಿ ಲಿಯೋನ್ ಹುಟ್ಟುಹಬ್ಬವನ್ನು ಮಂಡ್ಯದಲ್ಲಿ ಭರ್ಜರಿಯಾಗಿ ಆಚರಿಸಲಾಗಿದೆ.

ಅಭಿಮಾನಿಗಳಿಂದ ರಕ್ತದಾನ ಶಿಬಿರ, ಬಾಡೂಟ ಆಯೋಜನೆ ಮಾಡಲಾಗಿತ್ತಲ್ಲದೇ,
ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ.

ಮಂಡ್ಯ ತಾಲೂಕಿನ ಕೊಮ್ಮೇರಹಳ್ಳಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಸನ್ನಿ ಲಿಯೋನ್ ಅಭಿಮಾನಿಗಳ ಸಂಘದಿಂದ ಆಯೋಜಿಸಲಾಗಿತ್ತು.

ಗ್ರಾಮದ ಹೆಬ್ಬಾಗಿಲಲ್ಲಿ 20 ಅಡಿಗೂ ಉದ್ದದ ಸನ್ನಿ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು.

ಸನ್ನಿ‌ ಲಿಯೋನ್ ಸಮಾಜಮುಖಿ ಕಾರ್ಯಗಳನ್ನ ನೆನೆದು ಅಭಿಮಾನಿ ಪ್ರಸಾದ್ ಹುಟ್ಟು ಹಬ್ಬ ಆಚರಣೆ‌ ಕಾರ್ಯಕ್ರಮ ನಡೆಸಿದ್ದಾರೆ.

- Advertisement -

Latest News

error: Content is protected !!