Monday, April 29, 2024
Homeತಾಜಾ ಸುದ್ದಿಏಪ್ರಿಲ್ 10 ರಿಂದ ಮೇ 15ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬೇಸಿಗೆ ರಜೆ

ಏಪ್ರಿಲ್ 10 ರಿಂದ ಮೇ 15ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬೇಸಿಗೆ ರಜೆ

spot_img
- Advertisement -
- Advertisement -

2021-22ನೇ ಶೈಕ್ಷಣಿಕ ವರ್ಷದಲ್ಲಿ ಏಪ್ರಿಲ್ 10 ರಿಂದ ಮೇ 15ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬೇಸಿಗೆ ರಜೆ ನೀಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಮುಂಬರುವ ಶೈಕ್ಷಣಿಕ ವರ್ಷ 2022-23 ರಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷ 2021-22 ಅನ್ನು ಏಪ್ರಿಲ್ 9ಕ್ಕೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ.

ಮುಂದಿನ ಶೈಕ್ಷಣಿಕ ವರ್ಷ ಮೇ 16 ರಿಂದ ಆರಂಭವಾಗಲಿದೆ. ಏಪ್ರಿಲ್ 9 ರಂದು ಶೈಕ್ಷಣಿಕ ವರ್ಷ ಅಂತ್ಯವಾಗುವ ಕಾರಣ 1 ರಿಂದ 9 ನೇ ತರಗತಿಯ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ. 1 ರಿಂದ 5 ಮತ್ತು 1 ರಿಂದ 7/8 ತರಗತಿಗಳಿರುವ ಪ್ರಾಥಮಿಕ ಶಾಲೆಗಳಲ್ಲಿ ಮಾರ್ಚ್ 24 ರಿಂದ ಏಪ್ರಿಲ್ 4 ರವರೆಗೆ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು ಏಪ್ರಿಲ್ 9 ರಂದು ಫಲಿತಾಂಶ ಘೋಷಣೆ ಕಮಲ ಯಾಗಲಿದೆ. ಇನ್ನು 8 ಮತ್ತು 9ನೇ ತರಗತಿಗಳಿರುವ ಪ್ರೌಢ ಶಾಲೆಗಳಲ್ಲಿ ಮಾರ್ಚ್ 21 ರಿಂದ ಮಾರ್ಚ್ 26 ರವರೆಗೆ ವಿಷಯವಾರು ಪರೀಕ್ಷೆಗಳು, ಮಾರ್ಚ್ 29 ರಂದು ದೈಹಿಕ ಶಿಕ್ಷಣ ಮನನ ಮತ್ತು ಇತರೆ ಪರೀಕ್ಷೆಗಳು ನಡೆಯಲಿವೆ. ಏಪ್ರಿಲ್ 7 ರಂದು ಫಲಿತಾಂಶ ಪ್ರಕಟವಾಗಲಿದೆ.

ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳು ನಿರಂತರವಾಗಿ ನಡೆಯದ ಕಾರಣ ಶಿಕ್ಷಣ ಇಲಾಖೆ ಬೇಸಿಗೆ ರಜೆ ಮತ್ತು ಮುಂದಿನ ಶೈಕ್ಷಣಿಕ ವರ್ಷದ ಆರಂಭದ ಅವಧಿಯನ್ನು ಪರಿಷ್ಕರಿಸಿದೆ.

- Advertisement -
spot_img

Latest News

error: Content is protected !!