- Advertisement -
- Advertisement -
ಬಂಟ್ವಾಳ; ವರ್ಷಪ್ರತಿ ನಡೆಯುವ ಐತಿಹಾಸಿಕ ಧಾರ್ಮಿಕ ಹಿನ್ನೆಲೆಯುಳ್ಳ ಸುಳ್ಳಮಲೆ ಗುಹಾತೀರ್ಥ ಸ್ನಾನ ದಿನಾಂಕ 2-09-2024 ನೇ ಸೋಮವಾರದಿಂದ ದಿನಾಂಕ 7-09-2024 ನೇ ಶನಿವಾರದ ಭಾದ್ರಪದ ಶುಕ್ಲ ಚೌತಿಯವರಗೆ ಜರಗಲಿದೆ.

ಸೋಣ ಅಮಾವಾಸ್ಯೆಯಂದು ಬಿದಿರಿನ ಕೇರ್ಪು(ಏಣಿ) ಇಡುವ ಸಂಪ್ರದಾಯದ ಬಳಕ ಅರಸು ಶ್ರೀ ಗುಡ್ಡೆಚಾಮುಂಡಿ ಮತ್ತು ಪ್ರಧಾನಿ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಒಳಗೊಂಡಂತೆ ಅನೇಕ ವೈದಿಕ ವಿಧಿ ವಿಧಾನ ನಡೆದ ಬಳಿಕ ಭಕ್ತಾದಿಗಳಿಗೆ ತೀರ್ಥ ಸ್ಥಾನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ತೀರ್ಥ ಸ್ಥಾನಕ್ಕೆ ಬರುವ ಭಕ್ತಾದಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿಕೊಂಡು ಬರುವ ಮೂಲಕ ತೀರ್ಥ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಬೇಕಾಗಿ ಈ ಮೂಲಕ ವಿನಂತಿಸೋದಾಗಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಅವರು ಮನವಿ ಮಾಡಿದ್ದಾರೆ.

- Advertisement -