Wednesday, June 3, 2026
Homeಕರಾವಳಿಸುಳ್ಯ: ಭಾರಿ ಗಾತ್ರದ ಗೋಲಿ ಮರವೊಂದು ಮನೆ ಮೇಲೆ ಬಿದ್ದು ಸಂಪೂರ್ಣ ಹಾನಿ

ಸುಳ್ಯ: ಭಾರಿ ಗಾತ್ರದ ಗೋಲಿ ಮರವೊಂದು ಮನೆ ಮೇಲೆ ಬಿದ್ದು ಸಂಪೂರ್ಣ ಹಾನಿ

- Advertisement -
- Advertisement -

ತೊಡಿಕಾನ: ಭಾರಿ ಗಾತ್ರದ ಗೋಲಿ ಮರವೊಂದು ಬಿದ್ದು ಮನೆಯ ಮುಕ್ಕಾಲು ಭಾಗ ಕುಸಿದು ಬಿದ್ದಿದ್ದು, ಮನೆ ಮಂದಿಯೆಲ್ಲ ಪವಾಡ ಸದೃಶವಾಗಿ ಪಾರಾದ ಘಟನೆ ತೊಡಿಕಾನ ಗ್ರಾಮದ ಪಂಜಿಕೋಡಿ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ.

ಪಂಜಿಕೋಡಿ ಚಂದ್ರಶೇಖರ ಆಚಾರ್ಯ ಎಂಬವರ ಮನೆಗೆ ಭಾರಿ ಗಾತ್ರದ ಗೋಲಿ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ. ಮನೆ ಮುಕ್ಕಾಲು ಭಾಗ ಹಾನಿಯಾಗಿದ್ದು, ಕೊಟ್ಟಿಗೆ ಹಾಗೂ ಆಚಾರಿ ಕೊಟ್ಟಿಗೆ ಸಂಪೂರ್ಣ ಕುಸಿದಿದೆ.

ಸ್ಥಳಕ್ಕೆ ಕಂದಾಯ ಇಲಾಖೆ, ಪಂಚಾಯತ್‌, ಅರಣ್ಯ ಸಿಬ್ಬಂದಿಗಳು, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯರು ಮರ ತೆರವು ಮಾಡಲು ಸಹಕರಿಸಿ, ತಾತ್ಕಲಿಕವಾಗಿ ನೆಲೆಸಲು ಮನೆ ದುರಸ್ಥಿಗೆ ಸಹಕರಿಸಿದರು.

- Advertisement -

Latest News

error: Content is protected !!