Thursday, July 16, 2026
Homeಕರಾವಳಿಸುಳ್ಯ: ಸೂಟ್ ಕೇಸ್ ನಲ್ಲಿ ದನಮಾಂಸ ತುಂಬಿಸಿ ಸ್ಕೂಟರ್ ನಲ್ಲಿ ಸಾಗಾಟ, ಆರೋಪಿ ಬಂಧನ

ಸುಳ್ಯ: ಸೂಟ್ ಕೇಸ್ ನಲ್ಲಿ ದನಮಾಂಸ ತುಂಬಿಸಿ ಸ್ಕೂಟರ್ ನಲ್ಲಿ ಸಾಗಾಟ, ಆರೋಪಿ ಬಂಧನ

- Advertisement -
- Advertisement -

ಸುಳ್ಯ : ಸುಳ್ಯ ಗಾಂಧಿನಗರದಿಂದ ಪೈಚಾರು ಕಡೆಗೆ ಸೂಟ್ ಕೇಸ್ ನಲ್ಲಿ 15 ಕೆ.ಜಿ. ದನದ ಮಾಂಸ ತುಂಬಿಸಿ ಪೈಚಾರು ಕಡೆ ಸ್ಕೂಟರ್ ನಲ್ಲಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಸುಳ್ಯ ಪೊಲೀಸರು ಬಂಧಸಿದ್ದಾರೆ.

ಬಂಧಿತ ಆರೋಪಿಯನ್ನು ಕಲ್ಲುಮುಟ್ಲು ನಿವಾಸಿ ನಿಸಾರ್ (30) ಎಂದು ಗುರುತಿಸಲಾಗಿದೆ.

ಲಾಕ್ ಡೌನ್ ಹಿನ್ನಲೆಯಲ್ಲಿ ಪೊಲೀಸರು ಸುಳ್ಯದ ಜ್ಯೋತಿ ಸರ್ಕಲ್ ಬಳಿ ಸ್ಕೂಟರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾಗ ಪ್ರಕರಣ ಬೆಳಕಿಗೆ ಬಂತು. ಪೊಲೀಸರು ಸ್ಕೂಟರ್ ಸಮೇತ 15 ಕೆ.ಜಿ ದನದ ಮಾಂಸವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ

- Advertisement -

Latest News

error: Content is protected !!