ಸುಳ್ಯ; ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾತನ ಚಾಲನ ಪರವಾನಗಿ ಅಮಾನತು ಮಾಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ.
ದಿನಾಂಕ: 12/03/2026 ರಂದು ಸುಳ್ಯ ಪೇಟೆಯಲ್ಲಿ ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದ ಸುಳ್ಯ ನಿವಾಸಿ ರಕ್ಷಿತ್ ಜಿ ಎಂಬುವನ ಮೇಲೆ ಐ ಎಮ್ ವಿ ಆ್ಯಕ್ಟ್ ಅಡಿಯಲ್ಲಿ ಕಲಂ 119 R/w 177, 184,194(C) ರಂತೆ ಮೂರು ಲಘು ಪ್ರಕರಣವನ್ನು ಪ್ರತ್ಯೇಕವಾಗಿ ದಾಖಲಿಸಿ ಎಸ್ ಸಿ ಜೆ ಮತ್ತು ಜೆ ಎಮ್ ಎಫ್ ಸಿ ನ್ಯಾಯಾಲಯ ಸುಳ್ಯ ರವರಿಗೆ ಸುಳ್ಯ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂತೋಷ್ ಬಿಪಿ ರವರು ಚಾರ್ಜ್ ಶೀಟ್ ಸಲ್ಲಿಸಿದ ಮೇರೆಗೆ ಸಿ ಸಿ 42/26, 43/26, 44/26 ರಂತೆ ವಿಚಾರಣೆ ನಡೆದು ನ್ಯಾಯಾಲಯವು ಆರೋಪಿಗೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಟ್ಟು ಮೂರು ಸಾವಿರ ದಂಡವನ್ನು ಹಾಗೂ ಮೂರು ಪ್ರಕರಣಗಳಲ್ಲಿ ತಲಾ ಐದು ದಿನಗಳಂತೆ ದಿ: 15/03/2026 ರಿಂದ ದಿ: 29/03/2026 ರವರೆಗೆ ಒಟ್ಟು 15 ದಿನಗಳ ಕಾಲ ಸಮುದಾಯ ಸೇವೆಯನ್ನು ನಿರ್ವಹಿಸುವಂತೆ( ಸಂಚಾರ ನಿಯಮಗಳನ್ನು ಒಳಗೊಂಡ ಫಲಕಗಳನ್ನು ಹಿಡಿದು ಸುಳ್ಯ ಪೇಟೆಯ ಜಂಕ್ಷನ್ ಗಳಲ್ಲಿ ನಿಂತು ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲನೆಯ ಅರಿವನ್ನು ಮೂಡಿಸುವಂತೆ) ಆದೇಶಿಸಿರುತ್ತಾರೆ ಹಾಗೂ ಆರೋಪಿತನ ಚಾಲನ ಪರವಣಿಗೆಯನ್ನು ಮೂರು ತಿಂಗಳ ಕಾಲ ಅಮಾನತಿನಲ್ಲಿಡಲು ಆದೇಶಿಸಿರುತ್ತಾರೆ.


