Saturday, June 27, 2026
Homeಕರಾವಳಿಮಂಗಳೂರುಸುಳ್ಯ;  ಕುಕ್ಕರ್ ಸಿಡಿದು ಮನೆಗೆ ಹಾನಿ

ಸುಳ್ಯ;  ಕುಕ್ಕರ್ ಸಿಡಿದು ಮನೆಗೆ ಹಾನಿ

- Advertisement -
- Advertisement -

ಸುಳ್ಯ;  ಕುಕ್ಕರ್ ಸಿಡಿದು ಮನೆಗೆ ಹಾನಿಯಾಗಿರುವ ಘಟನೆ ಸುಳ್ಯದ ಬೋರುಗುಡ್ಡೆ ಎಂಬಲ್ಲಿ ನ.19ರ ಬುಧವಾರ ಸಂಭವಿಸಿದೆ.

ಬೋರುಗುಡ್ಡೆ ನಿವಾಸಿ ಅಬ್ದುಲ್ಲಾ ಅವರ ಮನೆಯಲ್ಲಿ ಬುಧವಾರ ಮುಂಜಾನೆ ಸಮಯ ಉಪಾಹಾರ ತಯಾರಿಸುವ ವೇಳೆ ಗ್ಯಾಸ್‌ ಒಲೆಯಲ್ಲಿ ಇಟ್ಟಿದ್ದ ಕುಕ್ಕರ್ ಸಿಡಿದು ಅಡುಗೆ ಮನೆಗೆ ಹಾನಿಯಾಗಿದೆ.  ಪರಿಣಾಮ ಅಡುಗೆ ಮನೆಯ ಗೋಡೆ, ಟೈಲ್ಸ್, ಮೇಲ್ಬಾವಣಿ ಹಾಗೂ ಅಡುಗೆ ಸಾಮಾಗ್ರಿಗಳು ಹಾನಿಗೀಡಾಗಿವೆ.

ಮನೆ ಮಂದಿ ಸಮೀಪದಲ್ಲೇ ಇದ್ದರೂ ಅದೃಷ್ಟವಶಾತ್ ಯಾವುದೇ ರೀತಿಯ ಗಾಯ ಅಥವಾ ಅಪಾಯ ಸಂಭವಿಸದೇ ಪಾರಾಗಿದ್ದಾರೆ.

- Advertisement -

Latest News

error: Content is protected !!