- Advertisement -
![]()
- Advertisement -
ಸುಳ್ಯ: ಲಾಡ್ಜ್ ವೊಂದರಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಕೇರಳ ರಾಜ್ಯದ ವಯನಾಡ್ ಜಿಲ್ಲೆಯ ನಡವಯಲ್, ಪುತುಕ್ಕುಳತಿಲ್ ನಿವಾಸಿ ವಿಜೇಶ್ (54) ಮೃತ ದುರ್ದೈವಿ.
ಸುಳ್ಯದ ಲಾಡ್ಜ್ ಒಂದರಲ್ಲಿ ವಾಸ್ತವ್ಯ ಹೂಡಿದ್ದ ವಿಜೇಶ್ ಅವರ ಯಾವುದೇ ಚಲನವಲನ ಕಾಣಿಸಿದ ಹಿನ್ನೆಲೆ ಲಾಡ್ಜ್ ಸಿಬ್ಬಂದಿ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹ ಪತ್ತೆಯಾದ ಕೋಣೆಯನ್ನು ತೆರೆದು ಪರಿಶೀಲಿಸಿದಾಗ ವಿಜೇಶ್ ಸಾವನ್ನಪ್ಪಿರೋದು ಗೊತ್ತಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ನೈಸರ್ಗಿಕ ಸಾವು ಎಂದು ಅಂದಾಜಿಸಲಾಗಿದೆ.
- Advertisement -


