Tuesday, July 14, 2026
Homeಕರಾವಳಿಮಂಗಳೂರುಸುಳ್ಯ: ಪೆರಾಜೆಯಲ್ಲಿ ಎರಡು ಬೈಕ್ ಗಳ ಮಧ್ಯೆ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಸುಳ್ಯ: ಪೆರಾಜೆಯಲ್ಲಿ ಎರಡು ಬೈಕ್ ಗಳ ಮಧ್ಯೆ ಅಪಘಾತ: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

- Advertisement -
- Advertisement -

ಸುಳ್ಯ: ಎರಡು ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೆರಾಜೆಯಲ್ಲಿ ನಡೆದಿದೆ.

ಕೇರಳದ ಪಯ್ಯನೂರಿನ ಕಾಂಟ್ರಾಕ್ಟರ್ ಪ್ರದೀಪನ್ ಎಂ ಮೃತ ದುರ್ದೈವಿ. ಮೂಲತಃ ಕೇರಳ ಕಣ್ಣೂರಿನ ಪಯ್ಯನೂರಿನವರಾದ ಪ್ರದೀಪನ್ ಅವರು ಪ್ರೈವೇಟ್ ಬಿಲ್ಡಿಂಗ್ ಕನಸ್ಟ್ರಕ್ಷನ್ ಅಸೋಸಿಯೇಷನ್ ರಾಜ್ಯ ಸಮಿತಿಯ ಸದಸ್ಯರು ಕೂಡ ಆಗಿದ್ದರು. ಕೆಲಸದ ನಿಮಿತ್ತ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕ್ ನಲ್ಲಿದ್ದ ಕಲ್ಲುಗುಂಡಿಯವರಾದ ಸುಮಂತ್ ಹಾಗೂ ರವಿ ಗಂಭೀರವಾಗಿ ಗಾಯಗೊಂಡಿದ್ದಾರೆ.

- Advertisement -

Latest News

error: Content is protected !!