- Advertisement -
![]()
- Advertisement -
ಸುಳ್ಯ: ಮರ್ಕಂಜ ಗ್ರಾಮದ ಬಳ್ಳಕಾನ ನಿವಾಸಿ ಐತಪ್ಪ ನಾಯ್ಕ ಎಂಬುವವರ ಪುತ್ರಿ ಕೀರ್ತನಾ (17) ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ.
ಮೇ 5 ರಂದು ಬೆಳಿಗ್ಗೆ 10:30ಕ್ಕೆ ಮನೆಯಿಂದ ಮಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿದ್ದು, ಈವರೆಗೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಇದೀಗ ಬಾಲಕಿಯ ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಸುಮಾರು 5 ಅಡಿ ಎತ್ತರ ಗೋಧಿ ಮೈಬಣ್ಣ, ಕನ್ನಡ ಮತ್ತು ತುಳು ಭಾಷೆಯಲ್ಲಿ ಮಾತನಾಡಬಲ್ಲವರಾಗಿದ್ದು, ಕಾಣೆಯಾಗುವ ಸಂದರ್ಭದಲ್ಲಿ ಹಳದಿ ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
- Advertisement -


