- Advertisement -
![]()
- Advertisement -
ಮಂಗಳೂರು; ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಜಪೆ ಶಾಂತಿಗುಡ್ಡೆ ನಿವಾಸಿ ಅಬ್ದುಲ್ ರಜಾಕ್ (59) ಬಂಧಿತ ಆರೋಪಿ. ಈತನನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ರಜಾಕ್ ಪ್ರಕರಣದಲ್ಲಿನ ಪ್ರಮುಖ ಆರೋಪಿಗಳ ಪೈಕಿ ತನ್ನ ಮಗ ಮೊಹಮ್ಮದ್ ಮುಜಾಂಮ್ಮಿಲ್ ಮತ್ತು ಮಗಳ ಗಂಡ ನೌಷದ್ ವಾಮಂಜೂರು @ ಚೊಟ್ಟೆ ನೌಷದ್ ಹಾಗೂ ಇತರ ಆರೋಪಿಗಳ ಜೊತೆ ಸೇರಿ ತನ್ನ ಮನೆಯಲ್ಲಿ ಕೊಲೆಗೆ ಸಂಚು ರೂಪಿಸಲು ಮತ್ತು ಆರೋಪಿಯು ತಲೆ ಮರೆಸಿಕೊಳ್ಳಲು ಸಹಕರಿಸಿರುತ್ತಾನೆ ಎನ್ನಲಾಗಿದೆ. ಈ ಕೊಲೆ ಪ್ರಕರಣದ ತನಿಖೆಯು ಮುಂದುವರಿದಿದ್ದು, ಪ್ರಕರಣದಲ್ಲಿ ಭಾಗಿಯಾದ ಇತರೆ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.
- Advertisement -


