- Advertisement -
- Advertisement -
ಮಂಗಳೂರಿನ ಪಟ್ಲ ಫೌಂಡೇಶನ್ ವತಿಯಿಂದ ‘ಯಕ್ಷ’ ಶಿಕ್ಷಣವೆನ್ನುವ ಹೊಸ ಯೋಜನೆಯೊಂದು ಶುರುವಾಗಿದ್ದು, ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿಯೇ ಯಕ್ಷಗಾನ ಶಿಕ್ಷಣವು ದೊರೆಯುತ್ತಿದೆ.
ದಕ್ಷಿಣ ಕನ್ನಡದ 40 ಪ್ರೌಢ ಶಿಕ್ಷಣ ಶಾಲೆಗಳ 4500 ವಿದ್ಯಾರ್ಥಿಗಳು ಕರಾವಳಿ ಜನರ ನಾಡಿಮಿಡಿತವಾದ ಯಕ್ಷಗಾನದ ಬಾಲ ಪಾಠ ಕಲಿಯುತ್ತಿದ್ದಾರೆ. ಯಕ್ಷ ಶಿಕ್ಷಣ ಯೋಜನೆ ಆರಂಭಗೊಂಡು 3 ತಿಂಗಳು ಕಳೆದಿದ್ದು, ಮಕ್ಕಳು ಉತ್ಸಾಹಕರಾಗಿ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ.
ಈ ಕುರಿತು ಹರೇಕಳ ಶಾಲೆಯ ಯಕ್ಷಗಾನ ಗುರು ಅಶ್ವತ್ಥ್ ಮಂಜನಾಡಿ,“ಇಷ್ಟರಲ್ಲೇ ವಿದ್ಯಾರ್ಥಿಗಳು ತಾಳ-ಲಯದ ಪಾಠ ಕರಗತ ಮಾಡಿಕೊಂಡು ನಾಟ್ಯಲೋಕವನ್ನು ಪ್ರವೇಶಿಸಿದ್ದಾರೆ. ವೇದಿಕೆಯೇರಿ ಪ್ರಸಂಗದಲ್ಲಿ ಪಾಲ್ಗೊಳ್ಳುವಷ್ಟು ಆತ್ಮವಿಶ್ವಾಸ ಅವರಲ್ಲಿ ಮೂಡಿದೆ,” ಎಂದು ಪತ್ರಿಕೆಯೊಂದರಲ್ಲಿ ತಿಳಿಸಿದ್ದಾರೆ.
- Advertisement -