Monday, June 8, 2026
Homeಕರಾವಳಿಹಿಜಾಬ್ ಧರಿಸಿ ತರಗತಿಗೆ ಬರುವವರನ್ನು ಡಿಬಾರ್ ಮಾಡಬೇಕು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

ಹಿಜಾಬ್ ಧರಿಸಿ ತರಗತಿಗೆ ಬರುವವರನ್ನು ಡಿಬಾರ್ ಮಾಡಬೇಕು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ

- Advertisement -
- Advertisement -

ವಿಜಯಪುರ: ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವವರನ್ನು ಡಿಬಾರ್ ಮಾಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.‌

ಮಂಗಳೂರಿನಲ್ಲಿ ಮತ್ತೆ ಹಿಜಾಬ್ ಗದ್ದಲ ಶುರುವಾಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ್, ದೇಶದ ಸಂವಿಧಾನ, ಕಾನೂನು, ಸುಪ್ರೀಂ ಕೋರ್ಟ್ ತೀರ್ಪು ಇವುಗಳಿಗೆ ಗೌರವ ಇಲ್ಲದವರ ಬಗ್ಗೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ‌

ಶಿಕ್ಷಣ ಪಡೆಯಬೇಕಾದರೆ ದೇಶದ ಸಂವಿಧಾನ, ನ್ಯಾಯಾಲಯ ಏನು ಹೇಳುತ್ತದೆಯೋ ಹಾಗೆ ನಡೆದುಕೊಳ್ಳಬೇಕು ಎಂದು ಹೇಳಿರುವ ಶಾಸಕ ಯತ್ನಾಳ್, ರಾಜ್ಯದಲ್ಲಿರುವ ಎಲ್ಲಾ ಮದರಸಗಳನ್ನು ಬಂದ್ ಮಾಡಬೇಕೆಂದು ಸಿಎಂಗೆ ಮನವಿ ಮಾಡಿದ್ದಾರೆ.

ಮದರಸಾಗಳಿಗೆ ಅನುದಾನ ಕೊಟ್ಟಿದ್ದರೆ ರದ್ದುಪಡಿಸಬೇಕು ಎಂದು ಒತ್ತಾಯಿಸಿರುವ ಯತ್ನಾಳ್,ಮದರಸಾದಲ್ಲಿ ಕಲಿಸುವುದು ಧರ್ಮಾಂಧತೆ, ದೇಶ ವಿರೋಧಿ ಚಟುವಟಿಕೆ ಎಂದು‌ ವಾಗ್ದಾಳಿ ನಡೆಸಿದ್ದಾರೆ.

- Advertisement -

Latest News

error: Content is protected !!