Thursday, June 13, 2024
Homeಉತ್ತರ ಕನ್ನಡನಾಲ್ವರು ವಿದ್ಯಾರ್ಥಿಗಳು ಸಮುದ್ರ ನೀರುಪಾಲು ಪ್ರಕರಣ: ಇಬ್ಬರ ಮೃತದೇಹ ಪತ್ತೆ

ನಾಲ್ವರು ವಿದ್ಯಾರ್ಥಿಗಳು ಸಮುದ್ರ ನೀರುಪಾಲು ಪ್ರಕರಣ: ಇಬ್ಬರ ಮೃತದೇಹ ಪತ್ತೆ

spot_img
- Advertisement -
- Advertisement -

ಉತ್ತರಕನ್ನಡ: ಕುಮುಟಾ ತಾಲೂಕಿನ ಬಾಡದ ಬಳಿ ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ 87 ವಿದ್ಯಾರ್ಥಿಗಳಲ್ಲಿ ನಾಲ್ವರು ವಿದ್ಯಾರ್ಥಿಗಳು ನೀರು ಪಾಲಾಗಿದ್ದರು. ಅಲೆಗಳ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದರು. ಅವರಲ್ಲಿ ಇಬ್ಬರ ಮೃತದೇಹಗಳು ಸಿಕ್ಕಿದ್ದು, ಇನ್ನಿಬ್ಬರಿಗೆ ಹುಡುಕಾಟ ಮುಂದುವರಿದಿದೆ.

ಮೃತರನ್ನು ಬೆಂಗಳೂರಿನ ಕಸ್ತೂರಬಾ ನಗರದ ಅರ್ಜುನ್ (23) ಹಾಗೂ ಪೀಣ್ಯದ ಚೈತ್ರಶ್ರೀ (27) ಎಂದು ಗುರುತಿಸಲಾಗಿದೆ. ರಾಜಾಜಿನಗರದ ತೇಜಸ್.ಡಿ (22) ಹಾಗೂ ಕನಕಪುರ ರಸ್ತೆಯ ಕಿರಣಕುಮಾರ (27) ಎಂಬುವವರಿಗೆ ಶೋಧ ಕಾರ್ಯ ಮಾಡಲಾಗುತ್ತಿದೆ. ಅವರು ಬೆಂಗಳೂರಿನ ಲೆಕ್ಕ ಪರಿಶೋಧನಾ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದರು.

ಇಂದು ಬೆಳಗ್ಗೆ ಎರಡು ಬಸ್‌ಗಳಲ್ಲಿ ಸುಮಾರು 87 ಮಂದಿ ಬಾಡದ ಸಿಲ್ವರ್ ಸ್ಯಾಂಡ್ ಬೀಚ್ ರೆಸಾರ್ಟ್‌ಗೆ ಬಂದಿದ್ದರು. ಅವರಲ್ಲಿ ನಾಲ್ವರು ಮಧ್ಯಾಹ್ನ ಊಟದ ಸಮಯದಲ್ಲಿ ಫೋಟೋ ತೆಗೆಯಲು ನೀರಿಗೆ ಇಳಿದಾಗ ಅವಘಡ ನಡೆದಿದೆ ಎಂದು ತಹಶೀಲ್ದಾರ್ ವಿವೇಕ ಶೇಣ್ವಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!