Wednesday, June 24, 2026
Homeಕರಾವಳಿಮಂಗಳೂರುಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಮೇಲೆ ಹಲ್ಲೆ

ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಮೇಲೆ ಹಲ್ಲೆ

- Advertisement -
- Advertisement -

ಪುತ್ತೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿರುವ ಘಟನೆ ಪುತ್ತೂರು ಕಸಬಾ ಗ್ರಾಮದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಬೆಳ್ತಂಗಡಿ ನಿವಾಸಿ ಆದಿಲ್ ಹುಸೈನ್ (21) ಹಲ್ಲೆಗೊಳಗಾದ ವಿದ್ಯಾರ್ಥಿ.

ಆದಿಲ್ ಹುಸೈನ್  ದಿನಾಂಕ:22-04-2026 ರಂದು ಸಂಜೆ, ಕಾಲೇಜಿನಿಂದ ತನ್ನ ಸ್ನೇಹಿತರಾದ ಸುಹೇಲ್ ಮತ್ತು ಅಝಾರ್ ಎಂಬವರೊಂದಿಗೆ  ಚಹಾ ಕುಡಿಯುತ್ತಿರುವಾಗ ಆದಿಲ್ ಹುಸೈನ್  ಪರಿಚಯದ ಆರೋಪಿಗಳಾದ ಬಿ ಕೆ ಮೊಯಿನುದ್ದೀನ್, ಮೋಹದ್ ಹಾಗೂ ಇತರ 5 ಜನ ಬಂದು  ಆದಿಲ್ ಹುಸೈನ್  ಗೆ ಹಲ್ಲೆ ನಡೆಸಿದ್ದಾರೆ. ಆಗ ಆದಿಲ್ ಹುಸೈನ್  ಜೊತೆಯಲ್ಲಿದ್ದ ಸ್ನೇಹಿತರು ಹಲ್ಲೆಯ ಬಗ್ಗೆ ಪ್ರಶ್ನಿಸಿದಾಗ ಅವರಿಗೂ ಆರೋಪಿಗಳು ಬೆದರಿಕೆ ಒಡ್ಡಿದ್ದು, ಅಲ್ಲಿದ್ದ ಸಾರ್ವಜನಿಕರು ಗಲಾಟೆಯನ್ನು ಬಿಡಿಸಲು ಬಂದಾಗ ಆರೋಪಿಗಳು ಆದಿಲ್ ಹುಸೈನ್  ಗೆ ಅವ್ಯಾಚವಾಗಿ ಬೈದು, ಜೀವಬೆದರಿಕೆ ಒಡ್ಡಿ ಸ್ಥಳದಿಂದ ತೆರಳಿರುತ್ತಾರೆ. ಹಲ್ಲೆಯಿಂದಾದ ಗಾಯಕ್ಕೆ ಆದಿಲ್ ಹುಸೈನ್  ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಕೆಲವು ತಿಂಗಳ ಹಿಂದೆ ಆದಿಲ್ ಹುಸೈನ್  ನ ಕಾಲೇಜಿನ ವಿದ್ಯಾರ್ಥಿಗಳಿಗೆ ಆರೋಪಿ ಮೊಯಿನುದ್ದೀನ್ ಮತ್ತು ಇತರರು  ಹೊಡೆಯುತ್ತಿರುವಾಗ ಗಲಾಟೆಯನ್ನು ಆದಿಲ್ ಹುಸೈನ್  ಬಿಡಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ತನ್ನ ಮೆಲೆ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ  ಪೊಲೀಸ್ ಠಾಣೆಯಲ್ಲಿ ಅ.ಕ್ರ : 49/2026,  ಕಲಂ: 189(2), 191(2), 191(3), 352,115(2), 118(1),351(2), ಜೊತೆಗೆ 190 ಬಿ ಎನ್ ಎಸ್  2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!