ಬೆಳ್ತಂಗಡಿ : ಕಾಲೇಜ್ ವಿದ್ಯಾರ್ಥಿ ಮನೆಯಿಂದ ಏಕಾಏಕಿ ನಾಪತ್ತೆಯಾದ ಘಟನೆ ಬೆಳ್ತಂಗಡಿಯ ಗುರುದೇವ ಕಾಲೇಜಿನ ಬಳಿಯ ಮನೆಯಲ್ಲಿ ನಡೆದಿದೆ.
ಗುರುದೇವ ಕಾಲೇಜಿನ ಬಳಿ ಇರುವ ಮನೆಯಲ್ಲಿ ವಾಸವಾಗಿರುವ ಶ್ರೀಮತಿ ಗೀತಾ ಎಂಬವರ ಮಗ ಪುನೀತ್ ಎಸ್.ಟಿ (21) ಎಂಬಾತನು 3 ನೇ ವರ್ಷದ ಬಿ.ಎಸ್.ಸಿ ನಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿದ್ದು ಸಪ್ಟೆಂಬರ್ 4 ರಂದು ಗೀತಾ ಅವರ ಮಗಳು ರಂಜಿತಾಳು ಬೆಳಿಗ್ಗೆ 7.45 ಗಂಟೆಗೆ ಕಾಲೇಜಿಗೆ ತೆರಳಿದ್ದು ಆ ಸಮಯ ಮನೆಯಲ್ಲಿ ಪುನೀತ್ ಎಸ್.ಟಿ ಎಂಬಾತನು ಒಬ್ಬನೇ ಇದ್ದು ತಾಯಿ ಸಕಲೇಶಪುರದಿಂದ ಮಧ್ಯಾಹ್ನ 3 ಗಂಟೆಗೆ ಬಂದು ಮನೆಯ ಬೀಗ ತೆಗೆದು ಒಳ ಹೋಗಿ ನೋಡಲಾಗಿ ಅವರ ಮಗ ಮನೆಯ ಹಾಲ್ ನಲ್ಲಿರುವ ಬೇಡ್ ಮೇಲೆ ಒಂದು ಪತ್ರ ಬರೆದಿಟ್ಟು ಮನೆಯಲ್ಲಿ ಯಾರಿಗೂ ಹೆಳದೇ ಹೋಗಿದ್ದು ಆತನು ಮನೆಯಿಂದ ಹೋಗುವಾಗ ಆತನನ್ನು ನೆರೆ ಮನೆಯ ಗಿರಿಜಾ ಎಂಬುವವರು 12:30 ಗಂಟೆಗೆ ನೋಡಿದ್ದು ಆ ಬಳಿಕ ಆತನ ಬಗ್ಗೆ ಗೀತಾ ತಮ್ಮ ಗಂಡ ಮತ್ತು ಕುಟುಂಬದವರ ಬಳಿ ವಿಚಾರಿಸಿದಲ್ಲಿ ಇವರೇಗೆ ಪತ್ತೆಯಾಗದೇ ಇದ್ದು ಕಾಣೆಯಾದ ತಮ್ಮ ಮಗ ಪುನೀತ್ ಎಸ್.ಟಿ ಎಂಬಾತನನ್ನು ಪತ್ತೆ ಮಾಡಿಕೊಡಬೇಕಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.