Friday, June 5, 2026
Homeಕರಾವಳಿಬೆಳ್ತಂಗಡಿ: ಕಾಲೇಜ್ ವಿದ್ಯಾರ್ಥಿ ನಾಪತ್ತೆ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಕಾಲೇಜ್ ವಿದ್ಯಾರ್ಥಿ ನಾಪತ್ತೆ, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬೆಳ್ತಂಗಡಿ: ಮಡಂತ್ಯಾರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಪ್ರಥಮ್ ಎಂಬವರು ಫೆ.21 ರಂದು ಕಾಲೇಜಿಗೆಂದು ಹೋದವರು ಕಾಲೇಜಿಗೂ ಹೋಗದೆ, ಮರಳಿ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ.

ಬೆಳಾಲು ನಿವಾಸಿಯಾಗಿರುವ ಜೆರಾಲ್ಡ್ ಡಿ’ಸೋಜಾ ಮತ್ತು ಪ್ರಮೀಳಾ ದಂಪತಿ ಪುತ್ರ ಪ್ರಥಮ್. ಈತ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಫೆ.21 ರಂದು ಮನೆಯಿಂದ ಕಾಲೇಜಿಗೆಂದು ತೆರಳಿದವರು, ತರಗತಿಗೂ ಹಾಜರಾಗಿಲ್ಲ ಹಾಗೇ ಮರಳಿ ಮನೆಗೂ ಬರಲಿಲ್ಲ. ತಮ್ಮ ಮಗನನ್ನು ಪತ್ತೆ ಮಾಡಿಕೊಡುವಂತೆ ವಿದ್ಯಾರ್ಥಿಯ ಹೆತ್ತವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Latest News

error: Content is protected !!