Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಕ್ರಿಸ್ಮಸ್ ಹಬ್ಬಕ್ಕೆ ಲೈಟಿಂಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು

ಬೆಳ್ತಂಗಡಿ : ಕ್ರಿಸ್ಮಸ್ ಹಬ್ಬಕ್ಕೆ ಲೈಟಿಂಗ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು

- Advertisement -
- Advertisement -

ಬೆಳ್ತಂಗಡಿ : ಮನೆಯಲ್ಲಿ ಕ್ರಿಸ್ಮಸ್ ಹಬ್ಬಕ್ಕಾಗಿ ಡಿ.19 ರಂದು ಬೆಳಗ್ಗೆ ಲೈಟಿಂಗ್ ಮಾಡಲು ವೈಯರ್ ಗಳನ್ನು ಜೋಡಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ವರ್ಶಿಸಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪೇರೋಡಿತ್ತಾಯಕಟ್ಟೆಯ ನಿವಾಸಿ ಸ್ಟೀಫನ್(14) ಎಂಬಾತ ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದು. ಈತ ಬೆಳ್ತಂಗಡಿ ಸೈಂಟ್ ತೆರೆಸಾ ಶಾಲೆಯಲ್ಲಿ 9 ತರಗತಿ ಕಲಿಯುತ್ತಿದ್ದಾನೆ. ಮೃತದೇಹವನ್ನು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಗೆ ತರಲಾಗಿದೆ.ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!