Saturday, June 29, 2024
Homeತಾಜಾ ಸುದ್ದಿಮೇ 16 ರಿಂದ ಶಾಲಾರಂಭ ಹಿನ್ನೆಲೆ: 2021-22ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಜೂನ್ 30...

ಮೇ 16 ರಿಂದ ಶಾಲಾರಂಭ ಹಿನ್ನೆಲೆ: 2021-22ನೇ ಸಾಲಿನ ವಿದ್ಯಾರ್ಥಿ ಬಸ್ ಪಾಸ್ ಜೂನ್ 30 ರವರೆಗೆ ಮುಂದುವರಿಕೆ

spot_img
- Advertisement -
- Advertisement -

ಬೆಂಗಳೂರು: ಮೇ 16 ರಿಂದ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗುಡ್ ನ್ಯೂಸ್ ನೀಡಿದೆ.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಬಸ್ ಪಾಸ್ ಪಡೆಯಲು ಕಾಲಾವಕಾಶ ನೀಡುವ ಸಲುವಾಗಿ 2021-22ನೇ ಸಾಲಿನಲ್ಲಿ ಪಡೆದಿರುವ ವಿದ್ಯಾರ್ಥಿ ಬಸ್ ಪಾಸ್ ಗಳನ್ನು ಮುಂದುವರಿಸಿದೆ.

2021-22ನೇ ಸಾಲಿನ ಬಸ್ ಪಾಸ್ ಗಳು ಜೂನ್ 30 ರವರೆಗೂ ಮಾನ್ಯತಾ ಅವಧಿ ಇರುವುದರಿಂದ ಇದೇ ಪಾಸ್ ಗಳನ್ನು ಬಳಸಿ ವಿದ್ಯಾರ್ಥಿಗಳು ಕೆಎಸ್ ಆರ್ ಟಿಸಿಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಹೊಸ ವಿದ್ಯಾರ್ಥಿ ಬಸ್ ಪಾಸ್ ಗಳ ವಿತರಣಾ ದಿನಾಂಕವನ್ನು ಕೆಎಸ್ ಆರ್ ಟಿ ಸಿ ಶೀಘ್ರದಲ್ಲೇ ಪ್ರಕಟಿಸಲಿದೆ.

- Advertisement -
spot_img

Latest News

error: Content is protected !!