Saturday, June 6, 2026
Homeಕರಾವಳಿನಾಳೆ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ : ತುಳು ಚಿತ್ರ ಪಡ್ಡಾಯಿ, ಕೊಂಕಣಿ...

ನಾಳೆ 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ : ತುಳು ಚಿತ್ರ ಪಡ್ಡಾಯಿ, ಕೊಂಕಣಿ ಚಿತ್ರ ಸೋಫಿಯಾಗೆ ನಾಳೆ ಸಿಎಂ ಪ್ರಶಸ್ತಿ  ಪ್ರದಾನ

- Advertisement -
- Advertisement -

ಬೆಂಗಳೂರು: 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಾಳೆ ನಡೆಯಲಿದೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ತೃತೀಯ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿರುವ ತುಳು ಚಿತ್ರ ಪಡ್ಡಾಯಿ ಮತ್ತು ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರವಾಗಿ ಅಯ್ಕೆಯಾಗಿರುವ ಕೊಂಕಣಿ ಚಿತ್ರ ಸೋಫಿಯಾ ಚಲನಚಿತ್ರಗಳಿಗೆ ನಾಳೆ ಪ್ರಶಸ್ತಿ ಪ್ರದಾನ ನಡೆಯಲಿದೆ. ‌ ಪಡ್ಡಾಯಿ ತುಳು ಚಲನಚಿತ್ರವನ್ನು ಉಡುಪಿಯ ಗೋಪಾಲ್ ಪೈ ಪಿಕ್ಚರ್ಸ್ ನಿರ್ಮಿಸಿದ್ದು, ಅಭಯ ಸಿಂಹ ಚಿತ್ರದ ನಿರ್ದೇಶಕರಾಗಿದ್ದಾರೆ.

ಸೋಫಿಯಾ ಕೊಂಕಣಿ ಚಲನಚಿತ್ರವನ್ನು ಮಂಗಳೂರಿನ ಜೆನಿತ್ ನರೋನಾ ಪ್ರೊಡಕ್ಷನ್ಸ್‌ ನಿರ್ಮಿಸಿದ್ದು, ಹ್ಯಾರಿ ಫರ್ನಾಂಡೀಸ್ ನಿರ್ದೇಶಿಸಿದ್ದಾರೆ. ಇದಲ್ಲದೇ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ಸಂತೋಷ್ ರೈ ಪಾತಾಜೆ, ಅತ್ಯುತ್ತಮ ಬಾಲನಟಿಯಾಗಿ ಶ್ಲಾಘ ಸಾಲಿಗ್ರಾಮ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

- Advertisement -

Latest News

error: Content is protected !!