Sunday, June 7, 2026
Homeಇತರಬಾಗಲಕೋಟೆಯಲ್ಲಿ ಎಸ್ಸೆಸೆಲ್ಸಿ ಪರೀಕ್ಷಾ ಮೇಲ್ವಿಚಾರಕಿಗೆ ಕೊರೊನಾ ಪಾಸಿಟಿವ್

ಬಾಗಲಕೋಟೆಯಲ್ಲಿ ಎಸ್ಸೆಸೆಲ್ಸಿ ಪರೀಕ್ಷಾ ಮೇಲ್ವಿಚಾರಕಿಗೆ ಕೊರೊನಾ ಪಾಸಿಟಿವ್

- Advertisement -
- Advertisement -

ಬಾಗಲಕೋಟೆ : ರಾಜ್ಯಾದಾದ್ಯಂತ  ಕೊರೊನಾ ಆತಂಕದ ನಡುವೆ ಎಸ್ಸೆಸೆಲ್ಸಿ ಪರೀಕ್ಷೆಗಳು ನಡೆಯುತ್ತಿವೆ, ಮೊನ್ನೆ ಬಾಗಲಕೋಟೆಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗೆ ಕೊರೊನಾ ದೃಢಪಟ್ಟಿತ್ತು. ಅಧರ ಬೆನ್ನಲ್ಲೇ ಇದೀಗ ವಿದ್ಯಾರ್ಥಿಯಿದ್ದ ಕೊಠಡಿ ಮೇಲ್ವಿಚಾರಕರಿಗೂ ಸೋಂಕು ದೃಢಪಟ್ಟಿದೆ. ಜೊತೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಸೋಂಕಿನ ಭಯ ಶುರುವಾಗಿದೆ.

ಬಾಗಲಕೋಟೆಯ ನವನಗರದಲ್ಲಿರುವ ಆದರ್ಶ ವಿದ್ಯಾಲಯದ ಬಾಹ್ಯ ಪರೀಕ್ಷಾ ಕೇಂದ್ರದಲ್ಲಿ  ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕಿಗೆ ಇದೀಗ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇವರು ಜೂನ್ 25 ಹಾಗೂ 27 ರಂದು ಇಲ್ಲಿ ಪರೀಕ್ಷಾ ಮೇಲ್ವಿಚಾರಕಿಯಾಗಿ ಕಾರ್ಯ ನಿರ್ವಹಿಸಿದ್ದರು. ಇದರಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಈಗ ಆತಂಕ ಶುರುವಾಗಿದೆ.

- Advertisement -

Latest News

error: Content is protected !!