Wednesday, May 1, 2024
Homeತಾಜಾ ಸುದ್ದಿದೀಪಾವಳಿ ಹಬ್ಬದ ಪ್ರಯುಕ್ತ ಮುಂಬೈ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ

ದೀಪಾವಳಿ ಹಬ್ಬದ ಪ್ರಯುಕ್ತ ಮುಂಬೈ-ಮಂಗಳೂರು ನಡುವೆ ವಿಶೇಷ ರೈಲು ಸಂಚಾರ

spot_img
- Advertisement -
- Advertisement -

ನವದೆಹಲಿ: ದೀಪಾವಳಿ ಹಬ್ಬದ ಪ್ರಯುಕ್ತ ಮುಂಬೈ-ಮಂಗಳೂರು ಜಂಕ್ಷನ್, ಮಡಗಾಂವ್ ಜಂಕ್ಷನ್ ಮತ್ತು ಪುಣೆ-ಅಜ್ಜಿ ನಡುವೆ ಮೂರು ವಿಶೇಷ ರೈಲು ಸೇವೆಗಳನ್ನು ಸೆಂಟ್ರಲ್ ರೈಲ್ವೆ ವತಿಯಿಂದ ಪ್ರಾರಂಭಿಸಲಾಗಿದೆ.

01185 ಗಾಡಿ ಸಂಖ್ಯೆಯ ವಿಶೇಷ ರೈಲು ಲೋಕಮಾನ್ಯ ತಿಲಕ್ ಟರ್ಮಿನಸ್ ನಿಂದ ಅಕ್ಟೋಬರ್ 21 ರಿಂದ ನವೆಂಬರ್ 11 ರವರೆಗೆ ಪ್ರತಿ ಶುಕ್ರವಾರ ರಾತ್ರಿ 10:15 ಕ್ಕೆ ಹೊರಡುತ್ತದೆ. ಒಟ್ಟು ನಾಲ್ಕು ಟ್ರಿಪ್‌ಗಳು ಇದ್ದು, ಮುಂಬೈನಿಂದ ರಾತ್ರಿ 10:15 ಕ್ಕೆ ಹೊರಟು ಮರುದಿನ ಸಂಜೆ 5:05 ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು 01186 ಗಾಡಿ ಸಂಖ್ಯೆಯ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಅಕ್ಟೋಬರ್ 22 ರಿಂದ ನವೆಂಬರ್ 21 ರವರೆಗೆ ಪ್ರತಿ ಶನಿವಾರ ಸಂಜೆ 6:45 ಕ್ಕೆ ಹೊರಡುತ್ತದೆ. ಇದು ನಾಲ್ಕು ಟ್ರಿಪ್‌ಗಳಿದ್ದು ಮಂಗಳೂರಿನಿಂದ ಸಂಜೆ 6:45 ಕ್ಕೆ ಹೊರಟು ಮರುದಿನ ಬೆಳಗ್ಗೆ 11.45 ಕ್ಕೆ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ಆಗಮಿಸಲಿದೆ.

- Advertisement -
spot_img

Latest News

error: Content is protected !!