Tuesday, June 18, 2024
Homeಕರಾವಳಿಪುತ್ತೂರು; ನಳಿನ್​ ಕುಮಾರ್​ ಕಟೀಲ್ ನಿವಾಸದಲ್ಲಿ ಗೌಪ್ಯ ಹೋಮ ; ರಾಜಯೋಗಕ್ಕಾಗಿ ದೇವರ ಮೊರೆ ಹೋದ್ರಾ...

ಪುತ್ತೂರು; ನಳಿನ್​ ಕುಮಾರ್​ ಕಟೀಲ್ ನಿವಾಸದಲ್ಲಿ ಗೌಪ್ಯ ಹೋಮ ; ರಾಜಯೋಗಕ್ಕಾಗಿ ದೇವರ ಮೊರೆ ಹೋದ್ರಾ ಬಿಜೆಪಿ ರಾಜ್ಯಾಧ್ಯಕ್ಷರು?

spot_img
- Advertisement -
- Advertisement -

ಪುತ್ತೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲು ಉಂಟಾದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೋಮ ಹವನದ ಮೊರೆ ಹೋಗಿದ್ದಾರೆ.

ಪುತ್ತೂರು ಸಮೀಪದ ಸವಣೂರು ಗ್ರಾಮದಲ್ಲಿರುವ ಅವರ ಕುಂಜಾಡಿ ಮನೆಯಲ್ಲಿ ವಿಶೇಷ ಹೋಮ ಮಾಡಲಾಗುತ್ತಿದೆ. ಜೂ.11ರಂದು ಆರಂಭವಾಗಿರುವ ಈ ಹೋಮ ಜೂ.18ರವರೆಗೆ ನಡೆಯಲಿದೆ. ವಿದ್ವಾನ್ ಬಾಲಕೃಷ್ಣ ಕಾರಂತ್ ನೇತೃತ್ವದಲ್ಲಿ ವಿಶೇಷ ಹೋಮ ಹವನ ನಡೆಯುತ್ತಿದ್ದು, ಯಾರನ್ನೂ ಕರೆದಿಲ್ಲ. ಮನೆಯ ಪ್ರವೇಶ ದ್ವಾರಗಳನ್ನು ಬಂದ ಮಾಡಿಸಿರುವ ನಳಿನ್ ಕುಮಾರ್ ಕಟೀಲ್​​, ಮನೆ ಕಡೆ ಯಾರೂ ಬಾರದಂತೆ ಎಚ್ಚರಿಕೆ ವಹಿಸಿದ್ದಾರೆ.

ಸದ್ಯ 9 ದಿನಗಳ ಹೋಮ ಹವನದ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಮೂಡಿದೆ. ಮತ್ತೊಂದೆಡೆ ರಾಜಕೀಯ ಉದ್ದೇಶದಿಂದ ಹೋಮ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.

ಈ ಬಾರಿ ಅವರಿಗೆ ಲೋಕಸಭೆ ಟಿಕೆಟ್​ ನೀಡಬಾರದು ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದೆಲ್ಲದರ ನಡುವೆ ಹೋಮ ಮಾಡಲಾಗುತ್ತಿದೆ. ನಳಿನ್​ ಕುಮಾರ್​ ಕಟೀಲ್​ ಅವರು ತಮ್ಮ ಸ್ಥಾನಕ್ಕೆ ಯಾವುದೇ ಕುತ್ತು ಬಾರದಿಲಿ ಮತ್ತು ಲೋಕಸಭೆ ಟಿಕೆಟ್​ ಕೈ ತಪ್ಪದಿರಲಿ ಎಂಬ ಕಾರಣಕ್ಕಾಗಿ ಗೌಪ್ಯವಾಗಿ ಹೋಮ ಹವನ ಮಾಡುತ್ತಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ.ಅಲ್ಲದೇ ರಾಜಯೋಗಕ್ಕಾಗಿ ಇದೆಲ್ಲವನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!