Thursday, May 9, 2024
Homeತಾಜಾ ಸುದ್ದಿನಾಳೆ ಸಂಜೆ 7 ಗಂಟೆಗೆ ಥೈಲ್ಯಾಂಡ್ ನಿಂದ ವಿಮಾನದಲ್ಲಿ ಬೆಂಗಳೂರಿಗೆ ಸ್ಪಂದನಾ ಪಾರ್ಥೀವ ಶರೀರ ರವಾನೆ

ನಾಳೆ ಸಂಜೆ 7 ಗಂಟೆಗೆ ಥೈಲ್ಯಾಂಡ್ ನಿಂದ ವಿಮಾನದಲ್ಲಿ ಬೆಂಗಳೂರಿಗೆ ಸ್ಪಂದನಾ ಪಾರ್ಥೀವ ಶರೀರ ರವಾನೆ

spot_img
- Advertisement -
- Advertisement -

ಬೆಂಗಳೂರು: ಹೃದಯಾಘಾತವಾಗಿ ಥೈಲಾಂಡ್ ನಲ್ಲಿ ನಿಧನರಾದ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಪಾರ್ಥೀವ ಶರೀರವನ್ನು ನಾಳೆ ಸಂಜೆ 7 ಗಂಟೆಗೆ ಥೈಲ್ಯಾಂಡ್ ನಿಂದ ವಿಮಾನದಲ್ಲಿ ಬೆಂಗಳೂರಿಗೆ ರವಾನೆ ಮಾಡಲಾಗುತ್ತದೆ.

ಈ ಸಂಬಂಧ ಭಾರತಕ್ಕೆ ಸ್ಪಂದನಾ ಮೃತದೇಹ ತರಲು ಥೈಲ್ಯಾಂಡ್ ರಾಯಭಾರ ಕಚೇರಿಯಿಂದ ಅನುಮತಿ ಪತ್ರ ಬಾಕಿಯಿದೆ ಎನ್ನಲಾಗುತ್ತಿದೆ.ಈ ಪ್ರಕ್ರಿಯೆ ಮುಗಿದ ಬಳಿಕ, ನಾಳೆ ಸಂಜೆ 7 ಗಂಟೆಗೆ ವಿಶೇಷ ವಿಮಾನದಲ್ಲಿ ಥೈಲ್ಯಾಂಡ್ ನಿಂದ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಮೃತದೇಹ ಬೆಂಗಳೂರಿಗೆ ರವಾನೆಯಾಗಲಿದೆ.

ನಾಳೆ 7 ಸಂಜೆ ಥೈಲ್ಯಾಂಡ್ ನಿಂದ ವಿಶೇಷ ವಿಮಾನದಲ್ಲಿ ಆಗಮಿಸುವ ಸ್ಪಂದನಾ ಪಾರ್ಥೀವ ಶರೀರವು, ನಾಳೆ ಮಧ್ಯರಾತ್ರಿ 1 ಗಂಟೆಗೆ ಕೆಂಪೇಗೌಡ ಏರ್ ಪೋರ್ಟ್ ಅನ್ನು ತಲುಪುವ ಸಾಧ್ಯತೆ ಇದೆ. ಈ ಬಳಿಕ ಕುಟುಂಬಸ್ಥರ ನಿರ್ಧಾರದ ನಂತ್ರ ಸ್ಪಂದನಾ ಪಾರ್ಥೀವ ಶರೀರದ ಅಂತ್ಯಕ್ರಿಯೆ ಬುಧವಾರದಂದೇ ನೆರೆವೇರಲಿದೆ ಎನ್ನಲಾಗುತ್ತಿದೆ.

- Advertisement -
spot_img

Latest News

error: Content is protected !!